ಬಹು ಸಂಖ್ಯಾತ ನೌಕರರಿಗೆ ಮನೆಯಿಂದ ಕೆಲಸ ಮಾಡುವುದೇ ಇಷ್ಟ: ಸಮೀಕ್ಷೆ

Update: 2016-06-10 18:17 GMT

ಹೊಸದಿಲ್ಲಿ, ಜೂ.10: ಗಮನಾರ್ಹ ಸಂಖ್ಯೆಯ ನೌಕರರು ಮನೆಯಿಂದಲೇ ಕೆಲಸ ಮಾಡಲು ಆಸಕ್ತಿ ಹೊಂದಿದ್ದಾರೆ. 45 ವರ್ಷ ಮೀರಿದವರಲ್ಲಿ ಈ ಆದ್ಯತೆ ಹೆಚ್ಚಾಗಿದೆಯೆಂದು ಸಮೀಕ್ಷೆಯೊಂದು ತಿಳಿಸಿದೆ.

ತಾವು ದೂರ ಸಂಪರ್ಕದ ಮೂಲಕ ಕೆಲಸ ಮಾಡುವುದನ್ನು ಇಷ್ಟಪಡುತ್ತೇವೆಂದು ಸರಿಸುಮಾರು ಸಮಾನ ಸಂಖ್ಯೆಯ ಪುರುಷರು ಹಾಗೂ ಮಹಿಳೆಯರು ಅಭಿಪ್ರಾಯಿಸಿದ್ದಾರೆಂದು ಮಾನವ ಸಂಪನ್ಮೂಲ ಸೇವೆಗಳ ಪೂರೈಕೆದಾರ ರ್ಯಾಂಡ್‌ಸ್ಟಾಡ್ ಇಂದು ಹೇಳಿದೆ.
ಭಾರತದಿಂದ ಪ್ರತಿಕ್ರಿಯೆ ನೀಡಿದವರಲ್ಲಿ ಶೇ.53ರಷ್ಟು ಮಂದಿ ತಾವು ದೂರ ಸಂಪರ್ಕದ ಮೂಲಕ ಕೆಲಸ ಮಾಡುವುದಕ್ಕೆ ಆದ್ಯತೆ ನೀಡುತ್ತೇವೆ ಎಂದಿದ್ದರೆ, ಶೇ.47 ಮಂದಿ ಪ್ರತಿ ದಿನ ಕಚೇರಿಗೆ ಹೋಗಿ ಕೆಲಸ ಮಾಡುವುದನ್ನು ಆಯ್ಕೆ ಮಾಡಿದ್ದರೆಂದು ಕೆಲಸದ ಸ್ಥಳದ ನಮನೀಯತೆಯ ಕುರಿತು ನಡೆಸಿದ ಸಮೀಕ್ಷೆಯ ಫಲಿತಾಂಶ ತಿಳಿಸಿದೆ. ಭಾರತದ ಸುಮಾರು 7,500 ನೌಕರರ ಸಮೀಕ್ಷೆಯ ಆಧಾರದಲ್ಲಿ ಈ ನಿರ್ಧಾರಕ್ಕೆ ಬರಲಾಗಿದೆ.
 ಸರಿಸುಮಾರು ಸಮಾನ ಸಂಖ್ಯೆಯ ಪುರುಷರು (ಶೇ.52) ಹಾಗೂ ಮಹಿಳೆಯರು (ಶೇ.54) ಮನೆಯಂದಲೇ ಕೆಲಸ ಮಾಡುವ ಬಗ್ಗೆ ಒಲವು ವ್ಯಕ್ತಪಡಿಸಿದ್ದಾರೆ. ಅವರಲ್ಲಿ ಹೆಚ್ಚಿನವರು 45ರ ಹರೆಯದವರು ಹಾಗೂ ಮೇಲಿನವರಾಗಿದ್ದಾರೆ. ಶೇ.58ರಷ್ಟು ಮಂದಿ ತಮ್ಮ ಈಗಿನ ಕೆಲಸದ ಅವಧಿಯ ಬಗ್ಗೆ ಸಂತೋಷ ವ್ಯಕ್ತಪಡಿಸಿದ್ದರೆ, ಸುಮಾರು ಶೇ.38ರಷ್ಟು ಜನ ಹೆಚ್ಚು ಸಂಬಳದ ಹೆಚ್ಚು ಕೆಲಸವನ್ನು ಮಾಡಲು ತಾವು ಬಯಸುತ್ತೇವೆಂದು ತಿಳಿಸಿದ್ದಾರೆ. ಕೆಲಸದ ಅವಧಿಯ ಪ್ರಶ್ನೆ ಬಂದಾಗ, ಶೇ.40 ಮಂದಿ ತಾವು ವಾರಕ್ಕೆ 45 ತಾಸುಗಳಿಗೂ ಹೆಚ್ಚು ಕೆಲಸ ಮಾಡುತ್ತೇವೆ ಎಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News