ಜೆಎಂಎಂ ಶಾಸಕ ಬಂಧನ

Update: 2016-06-11 18:16 GMT

ರಾಂಚಿ, ಜೂ.11: ಜಾರ್ಖಂಡ್ ಮುಕ್ತಿ ಮೋರ್ಚಾ ಶಾಸಕ ಚಮ್ರಾ ಲಿಂಡ ಅವರನ್ನು 2013ರ ಮಾರಾ ಮಾರಿ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಶನಿವಾರ ಬಂಧಿಸಲಾಗಿದೆ.

2013ರ ಈ ಪ್ರಕರಣದಲ್ಲಿ ಲಿಂಡಾ ವಿರುದ್ಧ ಬಂಧನ ವಾರಂಟ್ ಹೊರಡಿಸಲಾಗಿತ್ತು. ವಿಧಾನ ಸಭೆಯ ಪ್ರವೇಶ ದ್ವಾರದ ಬಳಿ ಸಂಜೆ ನಡೆದ ಗಲಭೆ ಯೊಂದರಲ್ಲಿ ಇವರು ಶಾಮೀಲಾಗಿದ್ದಾರೆ ಎಂದು ಆಪಾದಿಸಲಾಗಿತ್ತು.
ಘಟನೆ ನಡೆದ ತಕ್ಷಣ ಅವರ ವಿರುದ್ಧ ಎಪ್‌ಐಆರ್ ದಾಖಲಾಗಿತ್ತು. ಬಳಿಕ ಬಂಧನ ವಾರಂಟ್ ಹೊರಡಿಸಿದ್ದರೂ, ಅದು ನನೆಗುದಿಗೆ ಬಿದ್ದಿತ್ತು ಎಂದು ಅಧಿಕೃತ ಮೂಲಗಳು ಹೇಳಿವೆ.
ಕಾಂಗ್ರೆಸ್ ಶಾಸಕರಾದ ನಿರ್ಮಲಾ ದೇವಿ ಮತ್ತು ದೇವೇಂದ್ರ ಸಿಂಗ್ ಅವರು ಕೂಡಾ ಪ್ರತ್ಯೇಕ ಪ್ರಕರಣಗಳಲ್ಲಿ ಬಂಧನ ವಾರಂಟ್ ಎದುರಿಸುತ್ತಿದ್ದಾರೆ. ಜಾರ್ಖಂಡ್ ವಿಧಾನಸಭೆಯಿಂದ ರಾಜ್ಯಸಭೆಯ ಎರಡು ಸ್ಥಾನಗಳಿಗೆ ಚುನಾವಣಾ ಪ್ರಕ್ರಿಯೆ ಜಾರಿಯಲ್ಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News