ಬಡವರಿಗೆ ಚಿಕಿತ್ಸೆ ನಿರಾಕರಣೆ; ದಿಲ್ಲಿಯ 5 ಆಸ್ಪತ್ರೆಗಳಿಗೆ 600 ಕೋಟಿ ರೂ.ದಂಡ!

Update: 2016-06-12 07:29 GMT

ಹೊಸದಿಲ್ಲಿ, ಜೂ.12:  ಬಡವರಿಗೆ ಉಚಿತ ಚಿಕಿತ್ಸೆ ನೀಡಲು ನಿರಾಕರಿಸಿದ  ಆರೋಪ ಎದುರಿಸುತ್ತಿರುವ ದಿಲ್ಲಿಯ  5 ಖ್ಯಾತ ಖಾಸಗಿ ಆಸ್ಪತ್ರೆಗಳಿಗೆ ಆಮ್ ಆದ್ಮಿ ಪಕ್ಷದ ನೇತೃತ್ವದ ದಿಲ್ಲಿ ಸರಕಾರ 600 ಕೋಟಿ ರೂ. ದಂಡ  ವಿಧಿಸುವ ಮೂಲಕ ಶಾಕ್‌ ನೀಡಿದೆ. 

ಫೋರ್ಟಿಸ್ ಎಸ್ಕಾರ್ಟ್ಸ್ ಹಾರ್ಟ್ ಇನ್ಸ್​ಟಿಟ್ಯೂಟ್, ಮ್ಯಾಕ್ಸ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ (ಸಾಕೇತ್), ಶಾಂತಿ ಮುಕುಂದ್ ಆಸ್ಪತ್ರೆ, ಧರ್ಮಶೀಲ ಕ್ಯಾನ್ಸರ್ ಆಸ್ಪತ್ರೆ, ಪುಷ್ಪವತಿ ಸಿಂಘಾನಿಯಾ ರಿಸರ್ಚ್ ಇನ್ಸ್​ಟಿಟ್ಯೂಟ್ ಆಸ್ಪತ್ರೆಗಳಿಗೆ ದಂಡ ವಿಧಿಸಲಾಗಿದೆ. 

ದಿಲ್ಲಿ  ಸರಕಾರ ಈ 5 ಆಸ್ಪತ್ರೆಗಳು ಸೇರಿದಂತೆ ಒಟ್ಟು 43 ಖಾಸಗಿ ಆಸ್ಪತ್ರೆಗಳಿಗೆ ರಿಯಾಯತಿ ದರದಲ್ಲಿ  ಜಮೀನು ಒದಗಿಸಿತ್ತು.  ಜಮೀನು  ಮಂಜೂರು ಮಾಡುವಾಗ ಆಸ್ಪತ್ರೆಗೆ ಒಳರೋಗಿಗಳ ವಿಭಾಗದಲ್ಲಿ ದಾಖಲಾಗುವ ಶೇ 10ರಷ್ಟು ಬಡವರಿಗೆ ಹಾಗೂ   ಹೊರರೋಗಿಗಳ ವಿಭಾಗದಲ್ಲಿ  ಶೇ.25 ರಷ್ಟು ಬಡವರಿಗೆ ಉಚಿತ ಚಿಕಿತ್ಸೆ ನೀಡಬೇಕು ಎಂದು ಷರತ್ತು ವಿಧಿಸಲಾಗಿತ್ತು. ಆದರೆ ಈ ಐದು ಆಸ್ಪತ್ರೆಗಳು ಸರಕಾರದ ನಿಯಮವನ್ನು ಪಾಲಿಸುವಲ್ಲಿ ವಿಫಲವಾಗಿತ್ತು.   

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News