ಇವರು ಯೂಸುಫ್, ರೋಟಿ, ಕಪ್ಡಾ, ಪಾನಿ ಬ್ಯಾಂಕಿನ ಮುಖ್ಯಸ್ಥರು!

Update: 2016-06-12 07:52 GMT

ಮುಂಬೈ: ಯೂಸಫ್ ಮುಕಾತಿ ಹಾಗೂ ಅವರ ಸಹೋದರಿ ಒಂದೂವರೆ ವರ್ಷದ ಹಿಂದೆ ತಮ್ಮ ತಂದೆ ಹೆಸರಿನಲ್ಲಿ ಹಾರೂನ್ ಮುಕಾತಿ ಇಸ್ಲಾಮಿಕ್ ಸೆಂಟರ್ (ಎಚ್ಎಂಐಸಿ) ಎಂಬ ಸಂಘಟನೆ ಹುಟ್ಟುಹಾಕಿದಾಗ ಅ ಸಂಘಟನೆ ಮತ್ತು ಕಾರ್ಯಚಟುವಟಿಕೆಗಳು ಔರಂಗಾಬಾದ್ ನಲ್ಲಿ  ಮನೆಮಾತಾಗುತ್ತದೆ ಎಂಬ ಕನಸೂ ಕಂಡಿರಲಿಲ್ಲ.

ಅನಾಥ ಬಾಲಕಿಯರಿಗೆ ಶಿಕ್ಷಣ ನೀಡುವ ಸಲುವಾಗಿ ಹುಟ್ಟಿಕೊಂಡ ಎಚ್ಎಂಐಸಿ, ಇದೀಗ ಶಿಕ್ಷಣದ ಜತೆಗೆ ಆಹಾರ ಮತ್ತು ಬಟ್ಟೆಯನ್ನೂ ಬಡಬಗ್ಗರಿಗೆ ವಿತರಿಸುವ ಮಾನವೀಯ ಕಾರ್ಯ ಮಾಡುತ್ತಿದೆ. 15 ವಿವಿಧ ಕೋರ್ಸ್ ಗಳಲ್ಲಿ 21500 ಬಾಲಕಿಯರಿಗೆ ತರಬೇತಿ ನೀಡಿದೆ. "ಇಲ್ಲಿ ಬಾಲಕಿಯರಿಗೆ ಎಲ್ಲ ಸೌಲಭ್ಯವನ್ನೂ ಕಲ್ಪಿಸಲಾಗುತ್ತದೆ ಹಾಗೂ ಹವಾನಿಯಂತ್ರಿತ ತರಗತಿ ಕೊಠಡಿಗಳಲ್ಲಿ ಅತ್ಯುತ್ತಮ ಬೋಧಕರು ಪಾಠ ಪ್ರವಚನ ಮಾಡುತ್ತಾರೆ" ಎಂದು ಯೂಸುಫ್ ವಿವರಿಸುತ್ತಾರೆ.
ಕಡುಬಡತನದಿಂದಾಗಿ ಬಹುತೇಕ ವಿದ್ಯಾಥರ್ಿಗಳಿಗೆ ದಿನಕ್ಕೆ ಒಂದು ಒಳ್ಳೆಯ ಊಟ ಮಾಡುವ ಆರ್ಥಿಕ ಚೈತನ್ಯವೂ ಇಲ್ಲ ಎನ್ನುವ ಅಂಶ ಅವರ ಗಮನಕ್ಕೆ ಬಂದು, ವಿದ್ಯಾರ್ಥಿಗಳ ಸಮಸ್ಯೆ ತಿಳಿದುಕೊಳ್ಳುವ ಸಲುವಾಗಿಯೇ ವಿದ್ಯಾರ್ಥಿಗಳಿಗೆ ಸಂದರ್ಶನ ಏರ್ಪಡಿಸಿದರು. ಹಲವು ವಿದ್ಯಾರ್ಥಿಗಳು ದಿನಕ್ಕೆ ಒಂದು ಊಟ ಮಾತ್ರ ಮಾಡುತ್ತಿದ್ದಾರೆ ಹಾಗೂ ಮತ್ತೆ ಕೆಲವರು ಎರಡು ಬಾರಿ ಮಾತ್ರ ಉಣ್ಣುತ್ತಿದ್ದಾರೆ ಎನ್ನುವುದು ತಿಳಿದು ಅಚ್ಚರಿಯಾಯಿತು ಎಂದು ಹೇಳುತ್ತಾರೆ. ಇದು ರೋಟಿ ಬ್ಯಾಂಕ್ ಸ್ಥಾಪನೆಗೆ ಇದು ಸ್ಫೂರ್ತಿಯಾಯಿತು. ಇದಕ್ಕೆ ಸದಸ್ಯತ್ವ ಪಡೆದು ರೊಟ್ಟಿಗಳನ್ನು ಮಾಡಿ ಜನರು ತಮ್ಮ ಕೇಂದ್ರಕ್ಕೆ ತಲುಪಿಸಲು ವ್ಯವಸ್ಥೆ ಮಾಡಿದರು. ಕ್ಷಿಪ್ರ ಅವಧಿಯಲ್ಲೇ ಇದು ದೊಡ್ಡ ಯಶಸ್ಸು ಸಾಧಿಸಿದ್ದು, 500 ಮಂದಿ ಬಡಮಕ್ಕಳ ಹೊಟ್ಟೆ ತುಂಬಿಸುತ್ತಿದೆ. ಇದರಲ್ಲಿ ನಾಗರಿಕರು ಸ್ವಯಂಪ್ರೇರಣೆಯಿಂದ ಆಹಾರವನ್ನು ಠೇವಣಿ ಇಡಲು ಹಾಗೂ ಬಡವರು ತೆಗೆಯಲು ಅವಕಾಶ ಇರುತ್ತದೆ. ಈ ಬ್ಯಾಂಕಿನ ಸದಸ್ಯತ್ವ ಪಡೆದವರಿಗೆ ನಿರ್ಧಿಷ್ಟ ಸಂಕೇತವನ್ನು ನೀಡಲಾಗುತ್ತದೆ. ಅವರು ಆ ಬಳಿಕ ಕನಿಷ್ಠ ಎರಡು ರೋಟಿ ಹಾಗೂ ಸಸ್ಯಾಹಾರಿ ಅಥವಾ ಮಾಂಸಾಹಾರಿ ಪದಾರ್ಥ ನೀಡಲಾಗುತ್ತದೆ. ಇದೀಗ ಸದಸ್ಯತ್ವ ವ್ಯಾಪಕವಾಗಿರುವುದರಿಂದ ಆರು ಟನ್ ಸಾಮಥ್ರ್ಯದ ಮೂರು ಫ್ರಿಡ್ಜ್ ಖರೀದಿಸಲಾಗಿದೆ ಎಂದು ಯೂಸಫ್ ಹೇಳುತ್ತಾರೆ.
ಹೀಗೆ ಆಹಾರ ಪಡೆಯಲು ಬರುವವರಿಗೆ ಒಳ್ಳೆಯ ಬಟ್ಟೆ ಇಲ್ಲದಿರುವುದನ್ನು ಮನಗಂಡು, ಕಪ್ಡಾ ಬ್ಯಾಂಕ್ ಆರಂಭಿಸಿದರು. ಒಬ್ಬರಲ್ಲಿ 25 ಜತೆ ಬಟ್ಟೆ ಇದ್ದರೆ, ಕನಿಷ್ಠ ಎರಡು ಜತೆಯನ್ನಾದರೂ ಬಳಸುವುದಿಲ್ಲ. ಅವುಗಳನ್ನು ಬ್ಯಾಂಕ್ ಗೆ ದಾನ ಮಾಡುವಂತೆ ಮನವಿ ಮಾಡಿದೆವು, 2015ರಲ್ಲಿ ಯೋಜನೆ ಆರಂಭಿಸಿದ್ದು, ಹಲವು ಮಂದಿಗೆ ಬಟ್ಟೆ ವಿತರಿಸಿದೆ. ಈ ವರ್ಷ 25 ಸಾವಿರ ಮಂದಿಗೆ ವಿತರಿಸುವ ಗುರಿ ಹೊಂದಿದೆ. ಬಳಿಕ ಆರಂಭಿಸಿದ ಪಾನಿ ಬ್ಯಾಂಕ್ ನಿಂದ ಪ್ರತಿದಿನ 4000 ಮಂದಿಗೆ ತಲಾ ಒಂದು ಲೀಟರ್ ಬಾಟಲಿ ನೀರು ವಿತರಿಸಲಾಗುತ್ತಿದೆ.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News