ಉಡ್ತಾ ಪಂಜಾಬ್‌ ಬಿಡುಗಡೆಗೆ ಸೆನ್ಸಾರ್ ಮಂಡಳಿ ಗ್ರೀನ್‌ ಸಿಗ್ನಲ್‌

Update: 2016-06-13 07:05 GMT

ಭೋಪಾಲ್‌ , ಜೂ.13, ಅಶ್ಲೀಲ ಸಂಭಾಷಣೆ ಮತ್ತು ಶೀರ್ಷಿಕೆಯ ಕಾರಣಗಳಿಂದ ಸುದ್ದಿಯಾಗಿರುವ ಶಾಹಿದ್‌ ಕಪೂರ್‌ ಮತ್ತು ಅಲಿಯಾ ಭಟ್‌ ನಟನೆಯ ‘ಉಡ್ತಾ ಪಂಜಾಬ್‌’  ಚಿತ್ರದ 13 ದೃಶ್ಯಗಳಿಗೆ  ಕತ್ತರಿ ಹಾಕಿ  ಎ ಕೆಟಗೆರಿಯಲ್ಲಿ  ಕೇಂದ್ರೀಯ ಸೆನ್ಸಾರ್ ಮಂಡಳಿ ಬಿಡುಗಡೆಗೆ ಗ್ರೀನ್‌ ಸಿಗ್ನಲ್‌ ನೀಡಿದೆ.
ಸೆನ್ಸಾರ್‌ ಮಂಡಳಿಯ ಚೇರ್ಮನ್‌ ಪಹ್ಲಾಜ್ ನಿಹ್ಲಾನಿ ರವಿವಾರ ಸುದ್ದಿಗಾರರಿಗೆ  ಉಡ್ತಾ ಚಿತ್ರದ ಬಿಡುಗಡೆ ಬಗ್ಗೆ ಮಾಹಿತಿ ನೀಡಿದ್ದಾರೆ. ಜೂನ್ 17ಕ್ಕೆ ಬಿಡುಗಡೆಗೆ ಸಿದ್ದವಾಗಿರುವ ಚಿತ್ರದ ಬಗ್ಗೆ ವಿವಾದ ಕಂಡು ಬಂದಿತ್ತು.

ಉಡ್ತಾ ಪಂಜಾಬ್ ಚಿತ್ರ ಕುರಿತು ಎದ್ದಿರುವ ವಿವಾದ ಕುರಿತ ವಿಚಾರಣೆ ನಡೆಸಿರುವ  ಬಾಂಬೆ ಹೈ ಕೋರ್ಟ್  ಜೂ.13ಕ್ಕೆ ಆದೇಶ ನೀಡುವುದಾಗಿ  ಕೆಲವು ದಿನಗಳ ಹಿಂದೆ ತಿಳಿಸಿತ್ತು.
ಉಡ್ತಾ ಪಂಜಾಬ್ ಸಿನಿಮಾ ಕುರಿತು ಉಂಟಾಗಿರುವ ವಿವಾದದ ಕುರಿತು ಫ್ಯಾಂಟಮ್ ಫಿಲ್ಸ್ಮ್ ನಲ್ಲಿ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ನಡೆಸಿದ್ದ  ಬಾಂಬೆ ಹೈಕೋರ್ಟ್, ಸೆನ್ಸಾರ್ ಮಂಡಳಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿತ್ತು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News