ಉತ್ತರಪ್ರದೇಶಕ್ಕೆ ಅಗ್ರ ಸ್ಥಾನ

Update: 2016-06-13 18:32 GMT

ಹೊಸದಿಲ್ಲಿ, ಜೂ.13: ಉತ್ತರಪ್ರದೇಶದಲ್ಲಿ ದೇಶದಲ್ಲೇ ಅತ್ಯಧಿಕ ಬಾಲ ಕಾರ್ಮಿಕರಿದ್ದು, ಆನಂತರದ 3 ಸ್ಥಾನಗಳು ಕ್ರಮವಾಗಿ ಬಿಹಾರ, ರಾಜಸ್ಥಾನ ಹಾಗೂ ಮಹಾರಾಷ್ಟ್ರಗಳಿಗೆ ಹೋಗಿವೆ. ಬಾಲಕಾರ್ಮಿಕ ವಿರೋಧಿ ದಿನದ ಮುನ್ನಾ ದಿನವಾದ ಶನಿವಾರ ‘ಕ್ರೈ’ ನಡೆಸಿರುವ ಅಧ್ಯಯನವೊಂದು ಬಹಿರಂಗಪಡಿಸಿದೆ.

15ರಿಂದ 19ರ ವಯೋಮಾನದ ಬಾಲಕಾರ್ಮಿಕರಲ್ಲಿ ಶೇ.56 ಮಂದಿ ಒಂದೋ ಅನಕ್ಷರಸ್ಥರು ಅಥವಾ ಅರ್ಧದಲ್ಲೇ ಶಾಲೆ ಬಿಟ್ಟವರಾಗಿದ್ದಾರೆ. ಅವರು ಶಾಲೆಯಲ್ಲಿರಬೇಕಾದ ಸಮಯದಲ್ಲಿ ಕುಟುಂಬದ ಭಾರ ಹೊರುವ ಅನಿವಾರ್ಯ ಭಾರವನ್ನು ಹೊರಬೇಕಾಗಿದೆಯೆಂದು ಕ್ರೈಯ ಪಶ್ಚಿಮದ ಪ್ರಾಂತೀಯ ನಿರ್ದೇಶಕಿ ಕ್ರೀಯನ್ನೆ ರಾಬಡಿ ತಿಳಿಸಿದ್ದಾರೆ.

7ರಿಂದ 14 ವರ್ಷದೊಳಗಿನ ಶೇ.26ರಷ್ಟು ಬಾಲಕಾರ್ಮಿಕರು ನಿರಕ್ಷರಿಗಳೆಂದು ಅಂಕಿ-ಅಂಶ ಬಹಿರಂಗಪಡಿಸಿದೆ. ಅವರು ಶಾಲೆಗಳಿಗೆ ಹಾಜರಾಗುತ್ತಾರಾದರೂ, ಶಾಲಾವಧಿಗೆ ಮುನ್ನ ಹಾಗೂ ಬಳಿಕ ದೀರ್ಘ ಅವಧಿಗೆ ಕೆಲಸ ಮಾಡುತ್ತಾರೆ. ಅದರಿಂದಾಗಿ ಅವರ ಅಭಿವೃದ್ಧಿ ಕುಂಠಿತವಾಗುತ್ತದೆ. ಅವರು ಶಾಲೆಯನ್ನು ಅರ್ಧದಲ್ಲೇ ಬಿಡುವ ಸಂಭವ ಅಧಿಕವಾಗಿರುತ್ತದೆಂದು ರಾಬಡಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News