ಆಮಿರ್ ಖಾನ್ ಹೇಗಿದ್ದವರು ಹೇಗಾದರು ?

Update: 2016-06-14 07:38 GMT

ಮುಂಬೈ, ಜೂ.14: ತಮ್ಮ ಚಿತ್ರಗಳಿಗೆ ಅಗತ್ಯ ಬಿದ್ದಂತೆ ರೂಪಾಂತರಗೊಳ್ಳಲು ಯಾವ ಸಾಹಸಕ್ಕೂ ಸೈ ಎನ್ನುವ ನಟ ಅಮಿರ್ ಖಾನ್. ಗಜನಿ ಚಿತ್ರದಲ್ಲಿ ಅವರ ಲುಕ್ ಒಂದೇ ಇದಕ್ಕೆ ಸಾಕ್ಷಿ. ಇದೀಗ ತಮ್ಮ ಮುಂದಿನ ಚಿತ್ರ ‘ದಂಗಲ್’ಗಾಗಿ ಆಮಿರ್ ಮತ್ತೆ ರೂಪಾಂತರಗೊಂಡಿದ್ದಾರೆ. ಈ ಚಿತ್ರದಲ್ಲಿ ಅವರದ್ದು ಕುಸ್ತಿ ಪಟು ಮಹಾವೀರ್ ಫೋಗತ್ ಪಾತ್ರವಾಗಿದೆ.

ಮಹಾವೀರ್ ಫೋಗತ್‌ನ ಜೀವನದ ವಿವಿಧ ಮಗ್ಗಲುಗಳ ಮೇಲೆ ಈ ಚಿತ್ರ ಬೆಳಕು ಚೆಲ್ಲುವ ಕಾರಣ ಆಮಿರ್ ದೈಹಿಕವಾಗಿ ಹಲವಾರು ರೂಪಾಂತರಕ್ಕೊಳಗಾಗಬೇಕಾಯಿತು.
ಮಹಾವೀರ್ ಯುವಕನಾಗಿದ್ದಾಗ ಕಾಣಿಸುತ್ತಿದ್ದ ಹಾಗೆ ಥೇಟ್ ಅವರ ಥರಾನೇ ಕಾಣಿಸಿಕೊಳ್ಳಲು ಆಮಿರ್ ಎಷ್ಟು ಸಾಹಸ ಪಟ್ಟಿರಬಹುದೆನ್ನುವುದು ಅವರ ಈಗಿನ ಲುಕ್ ನೋಡಿದರೇ ಗೊತ್ತಾಗಿ ಬಿಡುತ್ತದೆ.

ಆಮಿರ್ ಅವರು ಎದುರಾಳಿಗಳೊಡನೆ ಸೆಣಸಲು ತಯಾರಾಗಿದ್ದಾರೇನೋ ಎಂಬಂತಿದೆ ಅವರ ಈಗಿನ ಲುಕ್. ಅಂತೂ ಆಮಿರ್ ಅಭಿಮಾನಿಗಳು ಥಿಯೇಟರ್‌ನಲ್ಲಿ ‘ದಂಗಲ್’ನೋಡಲು ಕಾತುರರಾಗಿ ಕಾಯುವಂತೆ ಮಾಡಿದೆ ಆಮಿರ್ ಅವರ ಸ್ಟಿಲ್ಸ್.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News