‘ಎಸ್ಕಾರ್ಟ್ ಸೇವೆಯ 240 ವೆಬ್‌ಸೈಟ್ ನಿಷೇಧ

Update: 2016-06-14 17:43 GMT

ಹೊಸದಿಲ್ಲಿ, ಜೂ.14: ಎಸ್ಕಾರ್ಟ್ ಸೇವೆಗಳನ್ನು ನೀಡುವ 240 ವೆಬ್‌ಸೈಟ್‌ಗಳನ್ನು ಸರಕಾರ ನಿಷೇಧಿಸಿದೆ. ಗೃಹ ಸಚಿವಾಲಯದ ತಜ್ಞರ ಸಮಿತಿಯೊಂದು ಈ ಬಗ್ಗೆ ಶಿಫಾರಸು ಮಾಡಿತ್ತು.
ಗೃಹ ಸಚಿವಾಲಯದ ಪರಿಣತರ ಸಮಿತಿಯ ಶಿಫಾರಸಿನನ್ವಯ 240 ಎಸ್ಕಾರ್ಟ್ ವೆಬ್‌ಸೈಟ್‌ಗಳನ್ನು ತಡೆಯುವಂತೆ ಸೋಮವಾರ ಅಂತರ್ಜಾಲ ಸೇವಾ ಪೂರೈಕೆದಾರರಿಗೆ ಆದೇಶ ನೀಡಲಾಗಿದೆಯೆಂದು ಮಾಹಿತಿ-ತಂತ್ರಜ್ಞಾನ ಸಚಿವಾಲಯದ ಅಧಿಕಾರಿಯೊಬ್ಬರು ಪಿಟಿಐಗೆ ತಿಳಿಸಿದ್ದಾರೆ.
ಪ್ರಕ್ರಿಯೆಯನುಸಾರ, ಸಂತ್ರಸ್ತ ವ್ಯಕ್ತಿಗಳು ಅಥವಾ ಪಕ್ಷವು ತಜ್ಞರ ಸಮಿತಿಯ ಮುಂದೆ ದೂರು ದಾಖಲಿಸುತ್ತದೆ. ಆ ಬಳಿಕ ಆ ಬಗ್ಗೆ ಸಮಿತಿಯು ನಿರ್ಧಾರವೊಂದನ್ನು ಕೈಗೊಳ್ಳು ತ್ತದೆಯೆಂದು ಅವರು ಹೇಳಿದ್ದಾರೆ.
ಆದಾಗ್ಯೂ, ಉದ್ಯಮ ಮೂಲಗಳು ಈ ಕ್ರಮವನ್ನು ದಿಕ್ಕಿಲ್ಲದುದೆಂದು ಟೀಕಿಸಿವೆ.
 ಎಲ್ಲ ವೆಬ್‌ಸೈಟ್‌ಗಳ ವಿಷಯವನ್ನು ತಡೆಹಿಡಿಯಲು ಸಾಧ್ಯವಿಲ್ಲ. ಅದರ ಸುತ್ತಲಿರುವ ತಾಂತ್ರಿಕ ಸಾಧ್ಯಾ ಸಾಧ್ಯಗಳನ್ನು ಪರಿಶೀಲಿಸದೆ ಆದೇಶ ಜಾರಿಗೊಳಿಸಲಾಗಿದೆ. ವೆಬ್‌ಸೈಟೊಂದು ಹೆಸರು ಅಥವಾ ಲಿಂಕ್‌ನಲ್ಲಿ ಅಲ್ಪ ಬದಲಾವಣೆ ಮಾಡಿದರೆ, ಅದು ಪುನಃ ಕೆಲಸ ಆರಂಭಿಸುತ್ತದೆಂದು ಅಂತರ್ಜಾಲ ಸೇವಾದಾರರ ಕಾರ್ಯ ವಾಹಿಯೊಬ್ಬರು ತಿಳಿಸಿದ್ದಾರೆ.
ಅಂತಹ ಚಟುವಟಿಕೆಗಳನ್ನು ನಿಯಂತ್ರಿಸಲು ವೆಬ್‌ಸೈಟ್‌ಗಳಲ್ಲಿರುವ ಮೊಬೈಲ್ ನಂಬರ್‌ಗಳನ್ನು ಪತ್ತೆ ಹಚ್ಚಬೇಕು ಹಾಗೂ ಅಪರಾಧಿಗಳನ್ನು ಬಂಧಿಸಬೇಕೆಂದು ಅವರು ಅಭಿಪ್ರಾಯಿಸಿದ್ದಾರೆ.
ಈ ಸಾಲಿನಲ್ಲಿರುವ ಹೆಚ್ಚಿನ ವೆಬ್‌ಸೈಟ್‌ಗಳು ಮುಂಬೈಯ ಯಾವುದಾದರೂ ಸ್ಥಳದ ಲಿಂಕ್ ಪಡೆದಿರುತ್ತವೆಂದು ಉದ್ಯಮ ಮೂಲಗಳು ಹೇಳಿವೆ.
ವರ್ತಮಾನ ಪತ್ರಿಕೆಗಳಲ್ಲಿ ಎಸ್ಕಾರ್ಟ್ಸ್ ಜಾಹೀರಾತು ಗಳನ್ನು ತಡೆಯುವುದಕ್ಕೂ ಸರಕಾರ ಪ್ರಯತ್ನ ನಡೆಸ ಬೇಕು. ಇದು ವಾಸ್ತವ ಸಮಸ್ಯೆ ಪರಿಹರಿಸುವ ಅರೆಮನಸ್ಸಿನ ಕ್ರಮವಾಗಿದೆ. ತಾನು ಗಮನಿಸಿರುವಂತೆ ಕೇವಲ ಭಾರತದ ವೆಬ್‌ಸೈಟ್‌ಗಳನ್ನಷ್ಟೇ ತಡೆಯುವಂತೆ ಸೂಚಿಸ ಲಾಗಿದೆಯೆಂದು ಕಾರ್ಯವಾಹಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News