ನಿಹಲಾನಿ ಉಚ್ಛಾಟನೆ: ಸಿಬಿಎಫ್‌ಸಿ ಪುನಾರಚನೆಗೆ ಕಶ್ಯಪ್ ಆಗ್ರಹ

Update: 2016-06-14 17:45 GMT

ಮುಂಬೈ, ಜೂ.14: ತಮ್ಮ ‘ಉಡ್ತಾ ಪಂಜಾಬ್’ ಚಿತ್ರದ ಪರವಾಗಿ ಬಾಂಬೆ ಹೈಕೋರ್ಟ್ ನೀಡಿರುವ ತೀರ್ಪನ್ನು ಸ್ವಾಗತಿಸಿರುವ ಸಹ ನಿರ್ಮಾಪಕ ಅನುರಾಗ್ ಕಶ್ಯಪ್, ಸೆನ್ಸಾರ್ ಮಂಡಳಿಯ ವರಿಷ್ಠ ಪಹ್ಲಾಜ್ ನಿಹಲಾನಿ ಯವರನ್ನು ಉಚ್ಛಾಟಿಸಬೇಕು ಹಾಗೂ ಸಿಬಿಎಫ್‌ಸಿಯನ್ನು ಪುನಾರಚಿಸಬೇಕೆಂದು ಇಂದಿಲ್ಲಿ ಆಗ್ರಹಿಸಿದ್ದಾರೆ.

ನಿಹಲಾನಿ ತಮಗೆ ಭಾರೀ ಸಮಸ್ಯೆಯಾಗಿದ್ದಾರೆ. ಆದರೆ, ಅವರು ಹೋದರೆ ಬೇರೆ ಯಾರು ಬರುತ್ತಾರೆ? ಬಂದವರು ಸಿನೆಮಾಟೋಗ್ರಾಫ್ ಕಾಯ್ದೆ ಹಾಗೂ ಕಾನೂನುಗಳನ್ನು ಇದೇ ರೀತಿ ಅಥವಾ ಕೆಟ್ಟದಾಗಿ ಅಥವಾ ಉತ್ತಮವಾಗಿ ವ್ಯಾಖ್ಯಾನಿಸಲಾರರೆಂಬುದಕ್ಕೆ ಖಾತ್ರಿ ಏನಿದೆ? ವ್ಯವಸ್ಥೆ ಪುನಾರಚನೆಯಾಗಬೇಕು. ಕೇವಲ ನಿಹಲಾನಿಯವರನ್ನಷ್ಟೇ ಖಾತ್ರಿ ಏನಿದೆ? ವ್ಯವಸ್ಥೆ ಪುನಾರಚನೆಯಾಗಬೇಕು. ಕೇವಲ ನಿಹಲಾನಿ ಯವರನ್ನಷ್ಟೇ ಬದಲಾಯಿಸಬೇಕೆಂಬುದು ತಮ್ಮ ಇಚ್ಛೆಯಲ್ಲವೆಂದು ಅವರು ಪತ್ರಕರ್ತರಿಗೆ ತಿಳಿಸಿದರು.
ಅಭಿಷೇಕ್ ಚೌಬೆ ನಿರ್ದೇಶನದ ಮಾದಕ ದ್ರವ್ಯ ಪಿಡುಗಿನ ಕತೆಯನ್ನೊಳ ಗೊಂಡ ಚಿತ್ರಕ್ಕೆ ಸರಣಿ ಕತ್ತರಿ ಪ್ರಯೋಗದ ಮಂಡಳಿಯ ನಿರ್ಧಾರದ ವಿರುದ್ಧ ಹೋರಾಟದಲ್ಲಿ ಕಶ್ಯಪ್ ಮುಂಚೂಣಿಯಲ್ಲಿದ್ದರು.
ಸೆನ್ಸಾರ್ ಮಂಡಳಿಯ ಆದೇಶದ ವಿರುದ್ಧ ಹೈಕೋರ್ಟ್ ಮೆಟ್ಟಲೇರಿದ ಅವರು, ಕೇವಲ ಒಂದು ಕತ್ತರಿ ಪ್ರಯೋಗ ದೊಂದಿಗೆ ಚಿತ್ರ ಪ್ರದರ್ಶಿಸಬಹುದೆಂಬ ಆದೇಶ ಪಡೆದರು.
ಇಂತಹ ಪ್ರಕರಣಗಳಲ್ಲಿ ವಿಷಯ ಕಳೆದು ಹೋಗುವುದು, ಭಾರೀ ರಾಜಕೀಯಕರಣವಾಗು ವುದು ಹಾಗೂ ಜನರು ಸಹ ರಕ್ಷಣಾತ್ಮಕರಾಗುವುದನ್ನು ತಾವು ಬಹಳಷ್ಟು ನೋಡಿದ್ದೇವೆ. ಇಂತಹ ನಷ್ಟದ ಸಾಧ್ಯತೆಯಿರುತ್ತದೆ. ಈ ಹೋರಾಟ ಚಿತ್ರದ ಕುರಿತು ಹಾಗೂ ತಾವೇನು ನಂಬಿದ್ದೇವೋ ಅದರ ಕುರಿತಾಗಿತ್ತು. ಅದು ಒಬ್ಬಂಟಿ ಹೋರಾಟವೆಂದು ಭಾವಿಸಿದ್ದೆ. ಆದರೆ, ಚಿತ್ರೋದ್ಯಮ ಅದರಲ್ಲಿ ಸೇರಿ ಕೊಂಡಿತೆಂದು ಕಶ್ಯಪ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News