ಸುಡುವ ಕೆಂಡದ ಮೇಲೆ ಮಗನನ್ನು ತಳ್ಳಿದ ತಂದೆ!

Update: 2016-06-14 17:47 GMT

ಜಲಂಧರ್, ಜೂ.14: ಜಲಂಧರ್‌ನಲ್ಲಿ ನಡೆದ ಮಾರಿಯಮ್ಮ ಜಾತ್ರೆಯ ಸಂದರ್ಭ ಸುಡುವ ಕೆಂಡದ ಮೇಲೆ ತನ್ನ ಆರು ವರ್ಷದ ಮಗನನ್ನು ಎತ್ತಿಕೊಂಡು ಬರಿಗಾಲಲ್ಲಿ ನಡೆದ ವ್ಯಕ್ತಿಯೊಬ್ಬ ಎಡವಿದ ಪರಿಣಾಮ ಬಾಲಕ ಕೆಂಡದ ಮೇಲೆ ಬಿದ್ದು ಗಂಭೀರ ಗಾಯಗೊಂಡ ಘಟನೆ ರವಿವಾರ ವರದಿಯಾಗಿದೆ. ಆದರೆ ವೌಢ್ಯದ ಪರಮಾವಧಿಯೆಂಬಂತೆ ನೋವಿನಿಂದ ನರಳುತ್ತಿರುವ ಬಾಲಕನನ್ನು ದೇವರೇ ಗುಣ ಪಡಿಸುತ್ತಾನೆಂಬ ಅಂಧ ವಿಶ್ವಾಸದಿಂದ ಕುಟುಂಬ ಸದಸ್ಯರು ಆತನನ್ನು ಆಸ್ಪತ್ರೆಗೆ ಸೇರಿಸಲು ನಿರಾಕರಿಸಿದ ಬಳಿಕ ಸ್ಥಳೀಯರೇ ಬಾಲಕನನ್ನು ಆಸ್ಪತ್ರೆಗೆ ದಾಖಲಿಸಿದರು. ಬಾಲಕನ ತಂದೆಗೆ ಕೂಡ ಶೇ.15ರಷ್ಟು ಸುಟ್ಟ ಗಾಯಗಳಾಗಿವೆ.

ಸುಮಾರು 600 ಮಂದಿ ಭಕ್ತಾದಿಗಳು ಮಾರಿಯಮ್ಮನ ಜಾತ್ರೆಗೆ ನೆರೆದಿದ್ದಾಗ ಈ ಘಟನೆ ಸಂಭವಿಸಿದ್ದು ಚಿತ್ರದಲ್ಲಿ ಹೂವಿನ ಮಾಲೆ ಧರಿಸಿದ್ದ ಬಾಲಕ ಕಾರ್ತಿಕ್ ನೋವಿನಿಂದ ಚೀರುತ್ತಿರುವುದನ್ನು ಕಾಣಬಹುದಾಗಿದೆ.
 ಪುರಾತನ ಪದ್ಧತಿಯಂತೆ ಭಕ್ತರು ಏಳು ದಿನಗಳ ಉಪವಾಸ ವ್ರತ ಆಚರಿಸಿದ ಬಳಿಕ ಸುಡುವ ಕೆಂಡದ ಮೇಲೆ ನಡೆದರೆ ದೇವರ ಕೃಪೆಗೆ ಪಾತ್ರರಾಗುತ್ತಾರೆಂಬ ನಂಬಿಕೆಯಿದೆ. ಮೂರು ವರ್ಷಗಳ ಹಿಂದೆ ಇಂತಹುದೇ ಸಂಪ್ರದಾಯ ಆಚರಣೆ ಸಂದರ್ಭ ಮಗಳನ್ನು ಕಂಕುಳಲ್ಲಿ ಎತ್ತಿಕೊಂಡಿದ್ದ ತಾಯಿಯೊಬ್ಬಳು ಕೆಂಡದ ಮೇಲೆ ಬಿದ್ದ ಘಟನೆ ನಗರದಲ್ಲಿ ನಡೆದಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News