ಆಂಧ್ರ ಸರಕಾರದಿಂದ ಮುಸ್ಲಿಮರಿಗೆ ರಮಝಾನ್ ಉಡುಗೊರೆ !

Update: 2016-06-15 14:56 GMT

ಹೈದರಾಬಾದ್ , ಜೂ. 15 : ಆಂಧ್ರ ಪ್ರದೇಶದ ತೆಲುಗು ದೇಸಂ ಸರಕಾರ ರಾಜ್ಯದ ಸುಮಾರು ಹತ್ತು ಲಕ್ಷ ಬಿಪಿಎಲ್ ಮುಸ್ಲಿಂ ಕುಟುಂಬಗಳಿಗೆ ಈದ್ ಕೊಡುಗೆ ನೀಡಲು ನಿರ್ಧರಿಸಿದೆ. ರಮಝಾನ್ ತಿಂಗಳ ಉಪವಾಸದ ಅಂತ್ಯಕ್ಕೆ ಬರುವ ಈದುಲ್ ಫಿತ್ರ್ ಗೆ ನೀಡಲಾಗುವ ಈ ಉಡುಗೊರೆ ಯೋಜನೆಗೆ " ರಮಝಾನ್ ತೋಹ್ಫಾ (ರಮಝಾನ್  ಉಡುಗೊರೆ )" ಎಂದು ಹೆಸರಿಡಲಾಗಿದೆ. 

ಇದರಲ್ಲಿ ಐದು ಕೆಜಿ ಗೋಧಿ , ಎರಡು ಕೆಜಿ ಸಕ್ಕರೆ , ಒಂದು ಕೆಜಿ ಶ್ಯಾವಿಗೆ ಹಾಗು 100 ಗ್ರಾಂ ತುಪ್ಪ ಇರುತ್ತವೆ. ಇದನ್ನು ಹಬ್ಬದ ಮೊದಲು ಜುಲೈ ಒಂದರಿಂದ ಏಳರೊಳಗೆ ರಾಜ್ಯದ ನ್ಯಾಯಬೆಲೆ ಅಂಗಡಿಗಳ ಮೂಲಕ ಬಿಪಿಎಲ್ ಮುಸ್ಲಿಂ ಕುಟುಂಬಗಳಿಗೆ ನೀಡಲಾಗುವುದು. ಮಂಗಳವಾರ ಈ ಕುರಿತ ಸಂಪುಟ ಉಪಸಮಿತಿ ಅನುಮೋದನೆ ನೀಡಿ ಸೂಕ್ತ ವ್ಯವಸ್ಥೆ ಮಾಡುವಂತೆ ನಾಗರೀಕ ಪೂರೈಕೆ ಇಲಾಖೆಗೆ ಸೂಚನೆ ನೀಡಿದೆ. ಇದರಿಂದ ರಾಜ್ಯ ಬೊಕ್ಕಸಕ್ಕೆ 60 ಕೋಟಿ ರೂಪಾಯಿ ಖರ್ಚಾಗಲಿದೆ. 

ಈ ಹಿಂದೆ ಇದೇ ರೀತಿಯ ಉಡುಗೊರೆಗಳನ್ನು ಬೇರೆ ಬೇರೆ ಸಮುದಾಯಗಳಿಗೆ ನೀಡಲು ಚಂದ್ರಬಾಬು ನಾಯ್ಡು ಸರಕಾರ  600 ಕೋಟಿ ರೂಪಾಯಿ ಖರ್ಚು ಮಾಡಿದೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News