ಟೊಮೆಟೋ ಬೆಲೆ ಇನ್ನೂ ಎರಡು ತಿಂಗಳು ಇಳಿಕೆಯಿಲ್ಲ

Update: 2016-06-16 16:30 GMT

ಹೊಸದಿಲ್ಲಿ,ಜೂ.16: ದೇಶಾದ್ಯಂತ ಚಿಲ್ಲರೆ ಮಾರುಕಟ್ಟೆಗಳಲ್ಲಿ ಪ್ರತಿ ಕೆ.ಜಿಗೆ 80 ರಿಂದ 100 ರೂವರೆಗೆ ಮಾರಾಟವಾಗುತ್ತಿರುವ ಟೊಮೆಟೋ ಬೆಲೆಗಳು ಮುಂದಿನ ಎರಡು ತಿಂಗಳುಗಳ ಕಾಲ ಗಗನಚುಂಬಿಯಾಗಿಯೇ ಮುಂದುವರಿಯುವ ಸಾಧ್ಯತೆಗಳಿವೆ. ಹೊಸಬೆಳೆಯು ಆಗಸ್ಟ್ ಅಂತ್ಯಕ್ಕೆ ಮುನ್ನ ಮಾರುಕಟ್ಟೆಗೆ ಬರದಿರುವುದು ಇದಕ್ಕೆ ಕಾರಣವಾಗಿದೆ.
ಸಾಮಾನ್ಯವಾಗಿ ಪ್ರತಿ ವರ್ಷ ಜೂನ್-ಸೆಪ್ಟೆಂಬರ್ ಅವಧಿಯಲ್ಲಿ ಟೊಮೆಟೋ ಬೆಲೆಗಳಲ್ಲಿ ಏರಿಕೆಯಾಗುತ್ತದೆ. ಆದರೆ ಈ ಬಾರಿ ದಕ್ಷಿಣದ ರಾಜ್ಯಗಳಲ್ಲಿ ಬರ ಸ್ಥಿತಿಯಿಂದಾಗಿ ಬೆಳೆ ಹಾನಿಯುಂಟಾಗಿ ಮೊದಲೇ ದರಗಳು ಗಗನಮುಖಿಯಾಗಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News