ಗುಲ್ಬರ್ಗ್‌ ಸೊಸೈಟಿ ಹತ್ಯಾಕಾಂಡ: ದೋಷಿಗಳಿಗೆ ಶಿಕ್ಷೆ ಪ್ರಕಟ

Update: 2016-06-17 06:27 GMT

ಅಹ್ಮದಾಬಾದ್‌, ಜೂ.17:ಮಾಜಿ ಸಂಸದ ಎಹಸಾನ್ ಜಾಫ್ರಿ ಸೇರಿದಂತೆ 69 ಮಂದಿ ಸಾವಿಗೆ ಕಾರಣವಾಗಿದ್ದ  2002ರ ಗುಲ್ಬರ್ಗ್‌ ಸೊಸೈಟಿ ಹತ್ಯಾಕಾಂಡ ಪ್ರಕರಣದ 24 ಮಂದಿ ತಪ್ಪಿತಸ್ಥರಿಗೆ ಇಂದು ಅಹ್ಮದಾಬಾದ್ ವಿಶೇಷ ನ್ಯಾಯಾಲಯ ಶಿಕ್ಷೆ ಪ್ರಕಟಿಸಿದೆ.
ಒಟ್ಟು 24ದೋಷಿಗಳಲ್ಲಿ 11 ಮಂದಿಗೆ ಸಾಯುವವರಗೆ ಜೈಲು, 17 ಮಂದಿಗೆ ಏಳುವರ್ಷ, ಓರ್ವನಿಗೆ 10 ವರ್ಷಗಳ ಜೈಲು ಸಜೆ ವಿಧಿಸಿ ನ್ಯಾಯಾಲಯ ತೀರ್ಪು ನೀಡಿದೆ. ಯಾವುದೇ ಅಪರಾಧಿಗೆ ನ್ಯಾಯಾಲಯ ಜೀವಾವಧಿ ಸಜೆ ವಿಧಿಸಿಲ್ಲ.
ಜೂ.2ರಂದು 24 ಮಂದಿ ಆರೋಪಿಗಳು ತಪ್ಪಿತಸ್ಥರೆಂದು ನ್ಯಾಯಾಲಯ ತೀರ್ಪು ಪ್ರಕಟಿಸಿತ್ತು. ಶಿಕ್ಷೆಯ ಪ್ರಮಾಣವನ್ನು ಪ್ರಕಟಿಸಿರಲಿಲ್ಲ.36ಆರೋಪಿಗಳನ್ನು ನ್ಯಾಯಾಲಯ ದೋಷಮುಕ್ತಗೊಳಿಸಿತ್ತು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News