ವಾಯುಸೇನಾ ಯೋಧರ ತರಬೇತಿಗೆ ನೂತನ ವಿಮಾನ: ರಕ್ಷಣಾ ಸಚಿವ ಪಾರಿಕ್ಕರ್‌ರಿಂದ ಲೋಕಾರ್ಪಣೆ

Update: 2016-06-17 16:37 GMT

ಬೆಂಗಳೂರು, ಜೂ. 17: ವಾಯುಸೇನಾ ಯೋಧರ ತರಬೇತಿಗಾಗಿ ವಿಶೇಷವಾಗಿ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ ಸಂಸ್ಥೆ (ಎಚ್‌ಎಎಲ್) ರೂಪಿಸಿರುವ ಹಿಂದೂಸ್ತಾನ್ ಟರ್ಬೋ ಟ್ರೈನರ್(ಎಚ್‌ಟಿಟಿ)-40 ನೂತನ ವಿಮಾನವನ್ನು ಕೇಂದ್ರ ರಕ್ಷಣಾ ಸಚಿವ ಮನೋಹರ್ ಪಾರಿಕ್ಕರ್ ಲೋಕಾರ್ಪಣೆ ಮಾಡಿದರು.

ಶುಕ್ರವಾರ ಬೆಂಗಳೂರಿನ ಎಚ್‌ಎಎಲ್ ಆವರಣದಲ್ಲಿನ ರಕ್ಷಣಾ ವಿಭಾಗದ ವಿಮಾನ ನಿಲ್ದಾಣದಲ್ಲಿ ನೂತನ ವಿಮಾನವನ್ನು ಲೋಕಾರ್ಪಣೆ ಮಾಡಿದ ಅವರು ಎಚ್‌ಎಎಲ್ ಸಂಸ್ಥೆ ನಿರ್ಮಿಸಿರುವ ಈ ಲಘು ವಿಮಾನ ಭಾರತೀಯ ವಾಯುಸೇನಾ ಯೋಧರ ತರಬೇತಿಗೆ ಲಭ್ಯವಾಗಲಿದೆ.

2,800ಕೆಜಿ ತೂಕದ ಈ ಲಘು ವಿಮಾನ, 950ಎಸ್‌ಎಚ್‌ಪಿ ಕ್ಲಾಸ್ ಟರ್ಬೋ ಪ್ರಾಪ್ ಎಂಜಿನ್ ಹೊಂದಿದೆ. ವಾಯುಸೇನಾ ಪೈಲಪ್‌ಗಳ ತರಬೇತಿಗೆ ಸೂಕ್ತ ವಿಮಾನದ ಬೇಡಿಕೆ ಇಟ್ಟಿದ್ದ ವಾಯುಸೇನೆಗೆ 2013ರ ಆಗಸ್ಟ್‌ನಲ್ಲಿ ಎಚ್‌ಎಎಲ್ ವಿಮಾನದ ವಿನ್ಯಾಸ ಮತ್ತು ತಾಂತ್ರಿಕತೆ ಕುರಿತು ಮಾಹಿತಿ ನೀಡಿತ್ತು. 2,800ಕೆಜಿ ತೂಕದ ಈ ಲಘು ವಿಮಾನ, 950ಎಸ್‌ಎಚ್‌ಪಿ ಕ್ಲಾಸ್ ಟರ್ಬೋ ಪ್ರಾಪ್ ಎಂಜಿನ್ ಹೊಂದಿದೆ. ವಾಯುಸೇನಾ ಪೈಲಪ್‌ಗಳ ತರಬೇತಿಗೆ ಸೂಕ್ತ ವಿಮಾನದ ಬೇಡಿಕೆ ಇಟ್ಟಿದ್ದ ವಾಯುಸೇನೆಗೆ 2013ರ ಆಗಸ್ಟ್‌ನಲ್ಲಿ ಎಚ್‌ಎಎಲ್ ವಿಮಾನದ ವಿನ್ಯಾಸ ಮತ್ತು ತಾಂತ್ರಿಕತೆ ಕುರಿತು ಮಾಹಿತಿ ನೀಡಿತ್ತು. ಎಚ್‌ಎಎಲ್ ಸಂಸ್ಥೆಯ ಈ ಮಾದರಿಗೆ ಕೇಂದ್ರ ಸರಕಾರವೂ ಅನುಮೋದನೆ ನೀಡುತ್ತಿದ್ದಂತೆಯೆ 2015ರ ಮೇ ತಿಂಗಳಲ್ಲಿ ವಿಮಾನದ ನಿರ್ಮಾಣ ಕಾರ್ಯ ಆರಂಭಿಸಲಾಗಿತ್ತು. ವಿಮಾನದ ನಿರ್ಮಾಣ ಕಾರ್ಯಪೂರ್ಣಗೊಂಡು ಮೇ 31ರಂದು ಈ ಎಚ್‌ಟಿಟಿ-40 ವಿಮಾನವನ್ನು ಪರೀಕ್ಷಾರ್ಥ ಹಾರಾಟ ನಡೆಸಲಾಗಿತ್ತು. ಎಚ್‌ಎಎಲ್ ಸಂಸ್ಥೆಯ ಈ ಮಾದರಿಗೆ ಕೇಂದ್ರ ಸರಕಾರವೂ ಅನುಮೋದನೆ ನೀಡುತ್ತಿದ್ದಂತೆಯೆ 2015ರ ಮೇ ತಿಂಗಳಲ್ಲಿ ವಿಮಾನದ ನಿರ್ಮಾಣ ಕಾರ್ಯ ಆರಂಭಿಸಲಾಗಿತ್ತು. ವಿಮಾನದ ನಿರ್ಮಾಣ ಕಾರ್ಯಪೂರ್ಣಗೊಂಡು ಮೇ 31ರಂದು ಈ ಎಚ್‌ಟಿಟಿ-40 ವಿಮಾನವನ್ನು ಪರೀಕ್ಷಾರ್ಥ ಹಾರಾಟ ನಡೆಸಲಾಗಿತ್ತು. ಪರೀಕ್ಷಾರ್ಥ ಹಾರಾಟದಲ್ಲಿ ಅಭೂತಪೂರ್ವ ಯಶಸ್ಸು ಕಂಡಿದ್ದ ನೂತನ ವಿಮಾನವನ್ನು ರಕ್ಷಣಾ ಸಚಿವ ಮನೋಹರ್ ಪಾರಿಕ್ಕರ್ ಲೋಕಾರ್ಪಣೆ ಮಾಡಿದ್ದಾರೆ. ಭಾರತೀಯ ವಾಯುಸೇನೆ ಇದೇ ಮಾದರಿಯ 70 ಹೊಸ ವಿಮಾನಗಳಿಗೆ ಬೇಡಿಕೆ ಇಟ್ಟಿದ್ದು, ಶೀಘ್ರದಲ್ಲಿ ವಾಯುಸೇನೆಯ ಬೇಡಿಕೆ ಈಡೇರಿಸಲಾಗುವುದು ಎಂದು ಎಚ್‌ಎಎಲ್ ತಿಳಿಸಿದೆ ಎಂದು ಗೊತ್ತಾಗಿದೆ.

ಬಾಕ್ಸ್..

ಭಾರ-2,800 ಕೆ.ಜಿ

ವೇಗ-ಗಂಟೆಗೆ 600ಕಿ.ಮೀ

ವ್ಯಾಪ್ತಿ-1ಸಾವಿರ ಕಿ.ಮೀ.

ಅಶ್ವಶಕ್ತಿ-950 ಎಸ್‌ಎಚ್‌ಪಿ ಅಶ್ವಶಕ್ತಿ-950 ಎಸ್‌ಎಚ್‌ಪಿ ವಿಮಾನದ ವೆಚ್ಚ-34.5 ಕೋಟಿ ರೂ.

ಮಾದರಿ ಸಿದ್ಧಗೊಂಡಿದ್ದು 2016ರ ಫೆಬ್ರವರಿ

ಮೊದಲ ಹಾರಾಟ 2016ರ ಮೇ 31

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News