ಜೂ.22ರಂದು ಭಾರತದಿಂದ 20 ಉಪಗ್ರಹ ಉಡಾವಣೆ

Update: 2016-06-17 18:18 GMT

ಚೆನ್ನೈ, ಜೂ.17: ಭಾರತವು ಜೂ.22ರಂದು ಒಂದೇ ಬಾರಿಗೆ 20 ಉಪಗ್ರಹಗಳನ್ನು ಹಾರಿಸಲಿದೆಯೆಂದು ಭಾರತೀಯ ಬಾಹ್ಯಾಕಾಶ ಸಂಸ್ಥೆ ತಿಳಿಸಿದೆ.
ಜೂ.22ರಂದು ಬೆಳಗ್ಗೆ 9:25ಕ್ಕೆ ಭಾರತೀಯ ರಾಕೆಟ್ ಪಿಎಸ್‌ಎಲ್‌ವಿ, ಆಂಧ್ರಪ್ರದೇಶದ ಶ್ರೀಹರಿಕೋಟಾದಿಂದ 20 ಉಪಗ್ರಹಗಳೊಂದಿಗೆ ನಭಕ್ಕೇರಲಿದೆಯೆಂದು ಇಸ್ರೊ ಹೇಳಿದೆ.
ರಾಕೆಟ್‌ನ ಪ್ರಧಾನ ಭಾರವು ಭಾರತದ ಭೂವೀಕ್ಷಣೆಯ 725.5 ಕಿ.ಗ್ರಾಂ ತೂಕದ ಕಾರ್ಟೊಸ್ಯಾಟ್-2 ಸರಣಿಯ ಉಪಗ್ರಹವಾಗಿದೆ. ಸುಮಾರು 560 ಕಿ.ಗ್ರಾಂ ತೂಕದ ಇತರ 19 ಉಪಗ್ರಹಗಳು ಅಮೆರಿಕ, ಕೆನಡ, ಜರ್ಮನಿ ಹಾಗೂ ಇಂಡೋನೇಶ್ಯಗಳದ್ದಾಗಿದ್ದು, ಚೆನ್ನೈಯ ಸತ್ಯಭಾಮಾ ವಿಶ್ವವಿದ್ಯಾನಿಲಯ ಹಾಗೂ ಪುಣೆಯ ಕಾಲೇಜ್ ಆಫ್ ಇಂಜಿನಿಯರ್‌ಗಳ ತಲಾ ಒಂದು ಉಪಗ್ರಹಗಳಿರಲಿವೆ.
ಒಟ್ಟು 1,288 ಕಿ.ಗ್ರಾಂ. ಭಾರ ಹೊತ್ತ ರಾಕೆಟ್ 2ನೆ ಉಡಾವಣಾ ವೇದಿಕೆಯಿಂದ ಹಾರಲಿದೆ. ಇಡೀ ಕಾರ್ಯಾಚರಣೆ ಸುಮಾರು 26 ನಿಮಿಷಗಳಲ್ಲಿ ನಡೆಯಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News