ಹಾಲಿ 13 ಸಚಿವರು ಔಟ್‌; ನಾಳೆ 4 ಗಂಟೆಗೆ ಹೊಸ ಸಚಿವರ ಪ್ರಮಾಣವಚನಕ್ಕೆ ರಾಜಭವನದಲ್ಲಿ ಮುಹೂರ್ತ

Update: 2016-06-18 07:52 GMT

ಹೊಸದಿಲ್ಲಿ, ಜೂ.18: ಕೊನೆಗೂ ರಾಜ್ಯ ಸಚಿವ ಸಂಪುಟ ಪುನರಾಚನೆಗೆ ಹೈಕಮಾಂಡ್‌ ಗ್ರೀನ್‌ ಸಿಗ್ನಲ್ ನೀಡಿದ್ದು, ಸಂಪುಟಕ್ಕೆ ಸೇರ್ಪಡೆಯಾಗಿರುವ ಹೊಸ ಶಾಸಕರ ಪ್ರಮಾಣ ವಚನಕ್ಕೆ ರವಿವಾರ ಸಂಜೆ 4 ಗಂಟೆಗೆ ರಾಜಭವನದಲ್ಲಿ ಮುಹೂರ್ತ ನಿಗದಿಯಾಗಿದೆ.

13 ಹಾಲಿ ಸಚಿವರನ್ನು ಕೈ ಬಿಡಲು ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ  ಒಪ್ಪಿಗೆ ನೀಡಿದ್ದಾರೆ.ಖಾತೆ ಕಳೆದುಕೊಳ್ಳಲಿರುವ ಸಚಿವರ ವಿವರ ಇಂತಿವೆ.
ಎಸ್‌.ಆರ‍್ ಪಾಟೀಲ್‌, ಕಿಮ್ಮನೆ ರತ್ನಾಕರ‍್, ಅಂಬರೀಶ್‌, ಶ್ಯಾಮನೂರು ಶಿವಶಂಕರಪ್ಪ, ದಿನೇಶ್ ಗುಂಡೂರಾವ್‌, ಬಾಬುರಾವ್‌ ಚಿಂಚನಸೂರು, ಖಮರುಲ್‌ ಇಸ್ಲಾಂ, ಶ್ರೀನಿವಾಸ್ ಪ್ರಸಾದ್‌, ವಿನಯ ಕುಮಾರ್‌ ಸೊರಕೆ, ಪಿ.ಟಿ.ಪರಮೇಶ್ವರ, ಸತೀಶ್‌ ಜಾರಕಿಹೊಳಿ, ಶಿವರಾಜ್‌ ತಂಗಡಗಿ, ಅಭಯಚಂದ್ರ ಜೈನ್‌.
ಸ್ವೀಕರ‍್ ಸ್ಥಾನವನ್ನು ಕಾಗೋಡು ತಿಮ್ಮಪ್ಪ ತೆರವುಗೊಳಿಸಲಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News