‘ಎಲಿಫೆಂಟ್’ ಪದ ತಪ್ಪಾಗಿ ಬರೆದ ಗುಜರಾತ್‌ನ ಎಂಬಿಎ ಸಚಿವ

Update: 2016-06-18 18:42 GMT

ದೀಸಾ (ಗುಜರಾತ್), ಜೂ.18: ಗುಜರಾತ್ ಸಚಿವರೊಬ್ಬರ ದಿಢೀರ್ ಶಾಲಾ ಭೇಟಿ ಬಗೆಗಿನ ಚಿತ್ರಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿವೆ. ಕಾರಣ ಸಚಿವರು ತರಗತಿ ಕೊಠಡಿಯಲ್ಲಿ ಎಲಿಫೆಂಟ್ ಪದದ ಸ್ಪೆಲ್ಲಿಂಗ್ ತಪ್ಪಾಗಿ ಬರೆ ದಿರುವುದು. ಈ ಅಪಹಾಸ್ಯಕ್ಕೆ ಒಳಗಾಗಿರುವ ಸಚಿವ ಶಂಕರ್ ಚೌಧರಿ.

ಈ ದೃಶ್ಯಗಳು ಟ್ವಿಟರ್ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಬಹಿರಂಗವಾಗುತ್ತಿದ್ದಂತೆ, ತಮ್ಮ ಕ್ರಮವನ್ನು ಸಮರ್ಥಿಸಿಕೊಳ್ಳಲು ಮುಂದಾದ ಸಚಿವರು, ಉದ್ದೇಶಪೂರ್ವಕವಾಗಿಯೇ ತಾವು ಹಾಗೆ ಬರೆದಿದ್ದು, ವಿದ್ಯಾರ್ಥಿಗಳು ತಪ್ಪನ್ನು ಗುರುತಿಸುತ್ತಾರೆಯೇ ಎಂದು ಪರೀಕ್ಷಿಸುವ ಸಲುವಾಗಿ ಹಾಗೆ ಮಾಡಿದ್ದಾಗಿ ಹೇಳಿಕೊಂಡಿದ್ದಾರೆ.
45 ವರ್ಷದ ಈ ಸಚಿವರ ವಿವರಣೆ ಸಮರ್ಪಕವಾಗಿಲ್ಲವಾದರೂ, ಬಿಜೆಪಿ ಮಾತ್ರ, ಕೆಲ ಪದಗಳ ಉಚ್ಚಾರಣೆ ಹಾಗೂ ಸ್ಪೆಲ್ಲಿಂಗ್ ಹೇಗೆ ಬದಲಾಗುತ್ತದೆ ಎಂದು ವಿದ್ಯಾರ್ಥಿಗಳಿಗೆ ತೋರಿಸುವ ಸಲುವಾಗಿ ಹೀಗೆ ಬರೆದಿದ್ದಾರೆ ಎಂದು ಹೇಳಿಕೊಂಡಿದೆ.
ಶಂಕರ ಚೌಧರಿ, ನಗರ ಗೃಹನಿರ್ಮಾಣ, ಸಾರಿಗೆ ಹಾಗೂ ಆರೋಗ್ಯ ಖಾತೆ ಸಚಿವರನ್ನು ಮಾಹಿತಿ ಹಕ್ಕು ಕಾರ್ಯಕರ್ತರೊಬ್ಬರು ಕೋರ್ಟ್‌ಗೆ ಎಳೆದಿದ್ದರು. ಸಚಿವರ ಎಂಬಿಎ ಪದವಿ ನಕಲಿ ಎನ್ನುವುದು ಆರೋಪವಾಗಿತ್ತು. ಗುಜರಾತ್ ವಿಧಾನಸಭೆ ಕಲಾಪದ ವೇಳೆ ಐಪಾಡ್ ಮೂಲಕ ಅಶ್ಲೀಲ ಜಾಲತಾಣಗಳನ್ನು ಸರ್ಫ್ ಮಾಡುತ್ತಿದ್ದುದು ಕೂಡಾ ಗದ್ದಲಕ್ಕೆ ಕಾರಣವಾಗಿತ್ತು. ಸಚಿವರು ಇದನ್ನು ನಿರಾಕರಿಸಿದ್ದರೂ, ಕೊನೆಗೆ ವಿಧಿವಿಜ್ಞಾನ ಪ್ರಯೋಗಾಲಯ ವರದಿ, ಇದನ್ನು ಖಚಿತಪಡಿಸಿತ್ತು. ಶಾಲಾ ದಾಖಲಾತಿಯನ್ನು ಹೆಚ್ಚಿ ಸುವ ಉದ್ದೇಶದಿಂದ ಹಮ್ಮಿಕೊಂಡಿರುವ ಶಾಲಾ ಪ್ರವಾಸೋತ್ಸವ ಅಂಗವಾಗಿ ಸಚಿವರು ಶಾಲೆಗಳಿಗೆ ಭೇಟಿ ನೀಡುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News