ಓಂ ಉಚ್ಚರಣೆಯಿಂದ ಯಾರ ಧರ್ಮವೂ ಬದಲುವುದಿಲ್ಲ: ಬಾಬಾ ರಾಮ್‌ದೇವ್

Update: 2016-06-20 06:48 GMT

  ಹೊಸದಿಲ್ಲಿ, ಜೂನ್ 20: ಯೋಗದಲ್ಲಿ ಓಂ ಉಚ್ಚರಿಸುವುದು ಹಾಗೂ ಸೂರ್ಯನಮಸ್ಕಾರ ಮಾಡುವುದರಿಂದ ಯಾರ ಧರ್ಮವೂ ಬದಲುವುದಿಲ್ಲ ಎಂದು ಇಂದು ಬಾಬಾರಾಮ್‌ದೇವ್  ಹೇಳಿದ್ದಾರೆ. ಯೋಗದ ಪ್ರಕೃತಿ"ಜಾತ್ಯತೀತ ಹಾಗೂ ವಿಶ್ವಮಟ್ಟದ್ದಾಗಿದೆ. ದುಬೈಯಲ್ಲಿ ಆಯೋಜಿಸಿದ್ದ ಯೋಗ ಶಿಬಿರದಲ್ಲಿ ಅಲ್ಲಿಗೆ ಬಂದ ಜನರಿಗೆ ಓಂ ಅಥವಾ ಆಮೆನ್ ಹೇಳಬಹುದೆಂದಾಗ ಅವರು ಆಮೆನ್ ಬದಲು ಓಂನ್ನು ಹೇಳಲು ಇಚ್ಛಿಸಿದರು. ಯೋಗ ಶಿಬಿರದಲ್ಲಿ ರಾಜಕುಟುಂಬದ ಸದಸ್ಯರಲ್ಲದೆ ಹಿಂದೂಗಳೂ ಮುಸ್ಲಿಮರೂ ಭಾಗವಹಿಸಿದ್ದರು" ಎಂದು ರಾಮ್ ದೇವ್ ವಿವರಿಸಿದ್ದಾರೆ.

   ಕೆಲವು ಸಮುದಾಯಗಳು ಯೋಗದಲ್ಲಿ ಓಂ ಉಚ್ಚರಿಸುವುದು ಹಾಗೂ ಸೂರ್ಯನಮಸ್ಕಾರ ಮಾಡುವುದನ್ನು ವಿರೋಧಿಸುತ್ತಿವೆ. ಇದಕ್ಕೆ ಪರೋಕ್ಷವಾಗಿ ಪ್ರತಿಕ್ರಿಯಿಸುತ್ತಾ ರಾಮ್‌ದೇವ್ ಹೀಗೆ ಹೇಳಿದ್ದಾರೆನ್ನಲಾಗಿದೆ. ದಿಲ್ಲಿಯ ರಾಜಪಥ್‌ನಲ್ಲಿ ಆಯುಷ್ ಸಚಿವಾಲಯದ ವತಿಯಿಂದ ಆಯೋಜಿಸಲಾದ ಯೋಗ ಕಾರ್ಯಕ್ರಮದಲ್ಲಿ ಅವರು ಭಾಗವಹಿಸಿ ಈ ಕಾರ್ಯಕ್ರಮದಲ್ಲಿ ತಾನು ಆಧ್ಯಾತ್ಮಿಕ ಭಾವನೆಯನ್ನು ಅನುಭವಿಸಿದೆ ಎಂದು ಅಭಿಪ್ರಾಯವನ್ನೂ ಪ್ರಕಟಿಸಿದರು. ಆಯುಷ್ ಯೋಗ ಶಿಬಿರದಲ್ಲಿ ಕೇಂದ್ರ ಸಚಿವರಾದ ಎಂ.ವೆಂಕಯ್ಯನಾಯ್ಡು, ಅರುಣ್ ಜೇಟ್ಲಿ, ಮತ್ತು ಬಾಬುಲ್ ಸುಪ್ರಿಯೊ ಬಿಜೆಪಿ ಸಂಸದರಾದ ಮೀನಾಕ್ಷಿ ಲೇಖಿ. ಮನೋಜ್ ತಿವಾರಿ ಮತ್ತು ವಿಜಯ್‌ಗೋಯಲ್ ಸಹಿತ ಬಹುಸಂಖ್ಯೆಯಲ್ಲಿ ಜನ ಸಾಮಾನ್ಯರು ಭಾಗವಹಿಸಿದ್ದರು.

  " ನಾನು ದುಬೈಗೆ ಹೋಗಿ ಅಲ್ಲಿನ ಜನರಲ್ಲಿ ಓಂ ಉಚ್ಚರಣೆ ಮಾಡಿಸಿದ್ದೇನೆ. ಸೂರ್ಯ ನಮಸ್ಕಾರವನ್ನೂ ಮಾಡಿಸಿದೆ. ಕೆಲವು ಮಸ್ಲಿಮರನ್ನು ಕರೆದು ಒಂದು ವೇಳೆ ಸೂರ್ಯನಮಸ್ಕಾರದಿಂದ ಅವರ ಧರ್ಮಬದಲಾಗುವುದಿದ್ದರೆ ಹಾಗೆ ಮಾಡಬೇಡಿ ಎಂದು ಹೇಳಿದೆ. ಆದರೆ ಯಾರ ಧರ್ಮವೂ ಬದಲಾಗಿಲ್ಲ. ಯೋಗ ಧಾರ್ಮಿಕ ಕಾರ್ಯಕ್ರಮವಲ್ಲ. ಬದಲಾಗಿ ಜಾತ್ಯತೀತ ಹಾಗೂ ವಿಶ್ವಮಟ್ಟದ ಕಾರ್ಯಕ್ರಮವಾಗಿದೆ" ಎಂದು ಆಯುಷ್ ಯೋಗ ಕಾರ್ಯಕ್ರಮದಲ್ಲಿ ಹೇಳಿದ್ದಾರೆಂದು ವರದಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News