ಗಾಯಗೊಂಡ ಬಲಗಾಲನ್ನು ಬಿಟ್ಟು ಎಡಗಾಲಿಗೆ ಶಸ್ತ್ರಚಿಕಿತ್ಸೆ ಮಾಡಿದ ಫೋರ್ಟಿಸ್ ಆಸ್ಪತ್ರೆಯ ವೈದ್ಯರು

Update: 2016-06-22 18:14 GMT

ಹೊಸದಿಲ್ಲಿ, ಜೂ.22: ಬಲಗಾಲಿಗೆ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ 24 ವರ್ಷದ ವ್ಯಕ್ತಿಯೊಬ್ಬನ ಎಡಗಾಲಿಗೆ ಶಸ್ತ್ರಚಿಕಿತ್ಸೆ ನಡೆಸಿ ಸ್ಕ್ರೂ ಅಳವಡಿಸಿದ ಆಘಾತಕಾರಿ ಘಟನೆ ಇಲ್ಲಿನ ಶಾಲಿಮಾರ್‌ಬಾಗ್‌ನಲ್ಲಿರುವ ಪೋರ್ಟಿಸ್ ಆಸ್ಪತ್ರೆಯಲ್ಲಿ ನಡೆದಿದೆ. ಘಟನೆಗೆ ಸಂಬಂಧಿಸಿ ವೈದ್ಯರ ಸಹಿತ 5 ಸಿಬ್ಬಂದಿಯನ್ನು 5 ಆಸ್ಪತ್ರೆಯು ವಜಾ ಮಾಡಿದೆ.

ಚಾರ್ಟೆಡ್ ಅಕೌಂಟೆಂಟ್ ಆಗಿದ್ದ ರವಿ ರೈ ಎಂಬವರು ರವಿವಾರ ಮೆಟ್ಟಿಲಿನಿಂದ ಇಳಿಯುವಾಗ ಬಿದ್ದು ತಮ್ಮ ಬಲಗಾಲಿಗೆ ಗಂಭೀರ ಗಾಯ ಮಾಡಿಕೊಂಡಿದ್ದರು. ಅವರನ್ನು ಫೋರ್ಟಿಸ್ ಆಸಸ್ಪತ್ರೆಗೆ ಕರೆದುಕೊಂಡು ಹೋಗಲಾಗಿತ್ತು. ಪರೀಕ್ಷೆಯ ಬಳಿಕ ಅವರಿಗೆ ಶಸ್ತ್ರಚಿಕಿತ್ಸೆ ಮಾಡಿ ಮೂಳೆಗಳನ್ನು ಜೋಡಿಸಲು ಸ್ಕ್ರೂ ಅಳವಡಿಸಬೇಕು ಎಂದು ಹೇಳಲಾಯಿತು. ಗಾಯವಾದ ಜಾಗಕ್ಕೆ ವೈದ್ಯರು ಕಪ್ಪು ಮಾರ್ಕರ್‌ನಿಂದ ಗುರುತನ್ನೂ ಮಾಡಿದ್ದರು. ಆದರೆ ಶಸ್ತ್ರಚಿಕಿತ್ಸೆ ಆಗಿ ಬರುವಾಗ ರವಿ ಅವರ ಕುಟುಂಬಕ್ಕೆ ಆಘಾತ ಕಾದಿತ್ತು. ವೈದ್ಯರು ರವಿ ಅವರ ಎಡಗಾಲಿಗೆ ಶಸ್ತ್ರಚಿಕಿತ್ಸೆ ಮಾಡಿ ಸ್ಕ್ರೂ ಅಳವಡಿಸಿದ್ದರು. ಗಾಯಗೊಂಡಿದ್ದ ಬಲಗಾಲನ್ನು ಮುಟ್ಟಿ ಕೂಡಾ ನೋಡಿರಲಿಲ್ಲ.

ಈ ಬಗ್ಗೆ ರವಿ ಅವರ ತಂದೆ ರಾಮ್‌ಕರಣ್ ಅವರು ವೈದ್ಯರನ್ನು ಪ್ರಶ್ನಿಸಿದಾಗ ತೀರಾ ಅಸಡ್ಡೆಯ ಉತ್ತರ ನೀಡಿದ್ದರು. ಇನ್ನೊಂದು ಶಸ್ತ್ರಚಿಕಿತ್ಸೆ ಮಾಡಿ ಎಡಗಾಲಿಗೆ ಅಳವಡಿಸಿದ ಸ್ಕ್ರೂಗಳನ್ನು ತೆಗೆದು ಬಲಗಾಲಿಗೆ ಅಳವಡಿಸಿದರೆ ಆಯಿತು ಎಂದು ಉಡಾಫೆಯ ಉತ್ತರ ನೀಡಿದ್ದಾರೆ. ರವಿ ಅವರ ಮೆಡಿಕಲ್ ಇನ್ಶೂರೆನ್ಸ್‌ನ 1 ಲಕ್ಷ ರೂಪಾಯಿಯನ್ನೂ ಈಗಾಗಲೇ ಅವರ ಕುಟುಂಬ ಆಸ್ಪತ್ರೆಗೆ ಪಾವತಿಸಿಯಾಗಿದೆ. ಆ ಪಾವತಿ ಆಗಿದೆಯೇ ಎಂದು ಖಚಿತಪಡಿಸಿಕೊಳ್ಳಲು ಫೋರ್ಟಿಸ್ ಆಸ್ಪತ್ರೆ ಶಸ್ತ್ರಚಿಕಿತ್ಸೆಯನ್ನು ಒಂದು ದಿನ ಮುಂದೂಡಿತ್ತು ಎಂದು ರವಿ ಅವರ ತಂದೆ ರಾಮ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News