ಪಶ್ಚಿಮ ಬಂಗಾಳದಲ್ಲಿ ಕಾಂಗ್ರೆಸ್‌ನ್ನು ದೂರವಿಟ್ಟ ಸಿಪಿಐಎಂ!: ತಪ್ಪು ತಿದ್ದುತ್ತಿದೆಯೇ?

Update: 2016-06-23 06:12 GMT

   ಹೊಸದಿಲ್ಲಿ, ಜೂನ್ 23: ಕೊಲ್ಕತಾದಲ್ಲಿ ಎಡಪಕ್ಷಗಳು ಕಾಂಗ್ರೆಸ್‌ನ್ನು ದೂರ ವಿಟ್ಟು ಬೆಲೆಯೇರಿಕೆ ವಿರೋಧಿ ರ್ಯಾಲಿಯನ್ನು ಆಯೋಜಿಸಿದೆ. ಪಶ್ಚಿಮಬಂಗಾಳದ ವಿಧಾನಸಭಾ ಚುನಾವಣೆಯಲ್ಲಿ ಸಿಪಿಎಂ ಕಾಂಗ್ರೆಸ್‌ನೊಂದಿಗೆ ಮೈತ್ರಿಮಾಡಿಕೊಂಡದ್ದು ತಪ್ಪಾದ್ದರಿಂದ ಅದನ್ನು ಸರಿಪಡಿಸಿಕೊಳ್ಳಬೇಕೆಂದು  ಅದರ ಕೇಂದ್ರ ಸಮಿತಿ ಸೂಚಿಸಿತ್ತು.

 ಕೇಂದ್ರ ಮತ್ತು ರಾಜ್ಯ ಸರಕಾರಗಳ ಜನವಿರೋಧಿ ನೀತಿಯನ್ನು ಖಂಡಿಸಿ ಎಡಪಕ್ಷಗಳು ಆಯೋಜಿಸಿದ ಪ್ರತಿಭಟನೆಯಲ್ಲಿ ಕಾಂಗ್ರೆಸ್ ಪಾಲ್ಗೊಳ್ಳದಂತೆ ಸಿಪಿಎಂ ಕೇಂದ್ರ ನೇತೃತ್ವ ವಿರೊಧಿಸಿಲ್ಲವಾದರೂ ಕಾರ್ಯಕ್ರಮದಲ್ಲಿ ಕಾಂಗ್ರೆಸ್‌ನ್ನು ಕರೆಯಬೇಕಿಲ್ಲ ಎಂದು ಸಿಪಿಎಂ ರಾಜ್ಯ ಘಟಕ ತೀರ್ಮಾನಿಸಿತ್ತು.

ರ್ಯಾಲಿಯಲ್ಲಿ ಸಿಪಿಎಂ ರಾಜ್ಯ ನಾಯಕರಾದ ಸೂರ್ಯಕಾಂತ ಮಿಶ್ರಾ ಬಿಮನ್ ಬೋಸ್, ಮುಹಮ್ಮದ್ ಸಲೀಂ ಮುಂತಾದವರು ಭಾಗವಹಿಸಿದ್ದರು. ಎಡಪಕ್ಷಗಳಲ್ಲದೆ, ಜನತಾದಳ ಯು.ಆರ್‌.ಜೆ.ಡಿ ಕೂಡಾ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದವು. ಶನಿವಾರ ಬೆಲೆಯೇರಿಕೆ ವಿರೋಧಿಸಿ ಕಾಂಗ್ರೆಸ್‌ನಿಂದಲೂ ರ್ಯಾಲಿ ನಡೆಯಲಿದೆ. ಅದರಲ್ಲಿ ಪಾಲ್ಗೊಳ್ಳಲು ಸಿಪಿಎಂಮತ್ತು ಇತರ ಎಡಪಕ್ಷಗಳಿಗೆ ಕಾಂಗ್ರೆಸ್ ಕರೆ ನೀಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News