ಪನ್ಸಾರೆ ಹತ್ಯೆ ತನಿಖೆ ನಿಧಾನಗತಿಗೆ ಹೈಕೋರ್ಟ್ ತರಾಟೆ

Update: 2016-06-23 14:51 GMT

ಮುಂಬೈ, ಜೂ.23: ಗೋವಿಂದ ಪನ್ಸಾರೆ ಹತ್ಯಾ ಪ್ರಕರಣದ ಸಂಬಂಧ - ಅವರ ಕುಟುಂಬದ ವಕೀಲರು ಪ್ರತಿಪಾದಿಸಿರುವಂತೆ. ಸಿಬಿಐ ತನಿಖೆಗೆ ಮಹಾರಾಷ್ಟ್ರ ಸರಕಾರವು ನಿರ್ಧರಿಸಿದೆಯೇ ಎಂಬುದನ್ನು ತಿಳಿಯಲು ಬಾಂಬೆ ಹೈಕೋರ್ಟ್ ಇಂದು ಬಯಸಿದೆ. ಈವರೆಗೆ ತನಗೆ ಅಂತಹ ಸೂಚನೆ ಬಂದಿಲ್ಲವೆಂದು ಪ್ರಾಸಿಕ್ಯೂಟರ್ ತಿಳಿಸಿದ್ದಾರೆ.

ಪನ್ಸಾರೆ ಹಾಗೂ ವಿಚಾರವಾದಿ ನರೇಂದ್ರ ಡಾಬೋಲ್ಕರ್‌ರ ಹತ್ಯಾಪ್ರಕರಣಗಳ ನಿಧಾನ ಮುನ್ನಡೆಗಾಗಿ ನ್ಯಾಯಾಲಯವು ಕ್ರಮವಾಗಿ ಸಿಐಡಿ ಹಾಗೂ ಸಿಬಿಐ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದೆ.

ಪನ್ಸಾರೆ ಕುಟುಂಬವು ಪ್ರಕರಣದ ಸಿಬಿಐ ತನಿಖೆಗೆ ಕೋರಿ ಮಹಾರಾಷ್ಟ್ರ ಸರಕಾರವನ್ನು ಸಮೀಪಿಸಿತ್ತು. ನಿನ್ನೆ ಅದಕ್ಕೆ ಸರಕಾರ ಸಮ್ಮತಿಸಿದೆಯೆಂದು ಹತ ಕಮ್ಯುನಿಸ್ಟ್ ನಾಯಕನ ಕುಟುಂಬವನ್ನು ಪ್ರತಿನಿಧಿಸುತ್ತಿರುವ ವಕೀಲ ಅಭಯ್ ನೆವ್ಗಿ, ನ್ಯಾಯಮೂರ್ತಿಗಳಾದ ಎಸ್.ಸಿ. ಧರ್ಮಾಧಿಕಾರಿ ಹಾಗೂ ಶಾಲಿನಿ ಫನ್ಸಾಲ್ಕರ್ ಜೋಶಿಯವರನ್ನೊಳಗೊಂಡ ಹೈಕೋಟ್ ಪೀಠಕ್ಕೆ ಮಾಹಿತಿ ನೀಡಿದರು.

ಆದಾಗ್ಯೂ, ಪಬ್ಲಿಕ್ ಪ್ರಾಸಿಕ್ಯೂಟರ್ ಸಂದೀಪ್ ಶಿಂಡೆ, ಈ ಸಂಬಂಧ ಸರಕಾರದಿಂದ ತನಗೆ ಯಾವುದೇ ಸೂಚನೆ ಬಂದಿಲ್ಲ ಎಂದರು.

ಅದಕ್ಕೆ ನ್ಯಾಯಪೀಠವು, ತನಿಖೆಯನ್ನು ಸಿಬಿಐಗೆ ಒಪ್ಪಿಸುವ ನಿರ್ಧಾರವನ್ನು ಸರಕಾರ ಕೈಗೊಂಡಿದೆಯೇ? ಎಂಬುದನ್ನು ತಿಳಿಯುವಂತೆ ಹಾಗೂ ಹೌದಾಗಿದ್ದರೆ ಅದರ ಹಿಂದಿನ ಕಾರಣವನ್ನು ತಿಳಿಸುವಂತೆ ಶಿಂದೆಯವರಿಗೆ ನಿರ್ದೇಶನ ನೀಡಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News