ತಲಾ 20 ಲಕ್ಷ ರೂ. ಲಂಚ ನೀಡಿದ್ದ ವಿದ್ಯಾರ್ಥಿಗಳು!

Update: 2016-06-24 04:57 GMT

ಪಾಟ್ನಾ, ಜೂನ್ 24: ಈ ವರ್ಷದ ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚು ಮಾರ್ಕ್‌ಗಳನ್ನು ಕೊಡುವ ಸಲುವಾಗಿ ವಿದ್ಯಾರ್ಥಿಗಳಿಂದ 20 ಲಕ್ಷ ರೂ.ಗಳಂತೆ ಲಂಚ ಪಡೆಯಲಾಗಿತ್ತು ಎಂಬುದೀಗ ಬಹಿರಂಗಗೊಂಡಿದೆ. ಬಿಹಾರದ ಶಾಲಾ ಪರೀಕ್ಷಾ ಬೋರ್ಡ್(ಬಿಎಸ್‌ಇಬಿ) ಮಾಜಿ ಅಧ್ಯಕ್ಷ ಲಲ್ಕೇಶ್ವರ್ ಪ್ರಸಾದ್ ಸಿಂಗ್ ಸ್ಫೋಟಕ ಮಾಹಿತಿಯನ್ನು ಬಹಿರಂಗಪಡಿಸಿದ್ದಾನೆ.

ಕಲಿಕೆಯಲ್ಲಿ ಹಿಂದುಳಿದಿರುವ ವಿದ್ಯಾರ್ಥಿಗಳಿಂದ ಹಣವನ್ನು ಪಡೆದು ಹೆಚ್ಚು ಮಾರ್ಕ್ ಕೊಟ್ಟು ಪಾಸು ಮಾಡಲಾಗಿದೆ. ಗುಣಮಟ್ಟರಹಿತ ಕಾಲೇಜುಗಳಿಗೆ ಅಂಗೀಕಾರ ನೀಡಲು ಈತ ನಾಲ್ಕುಲಕ್ಷದಂತೆ ಲಂಚ ಪಡೆದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಬಂಧನಕ್ಕೊಳಗಾಗಿರುವ ಸಿಂಗ್ ಮತ್ತು ಆತನ ಪತ್ನಿ ಮಾಜಿ ಎಂಎಲ್‌ಎ ಹಾಗೂ ಮಾಜಿ ಪ್ರಿನ್ಸಿಪಾಲ್ ಉಷಾ ಸಿನ್ಹಾರ ಪೊಲೀಸ್ ಕಸ್ಟಡಿ ಮುಂದುವರಿದಿದೆ. ಸಿಂಗ್ ಪರೀಕ್ಷಾ ಬೋರ್ಡ್ ಅಧ್ಯಕ್ಷನಾಗಿದ್ದಾಗ 100ಕ್ಕೂ ಅಧಿಕ ಕಾಲೇಜುಗಳಿಗೆ ಕಾನೂನು ಬಾಹಿರವಾಗಿ ಅಂಗೀಕಾರವನ್ನು ನೀಡಿದ್ದಎಂದು ಸೀನಿಯರ್ ಎಸ್ಪಿ ಮನುಮಹಾರಾಜ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News