ನಾಲ್ಕನೇ ದರ್ಜೆ ನೌಕರಿಗೆ 34 ಪಿಎಚ್‌ಡಿ, 12,000 ಇಂಜಿನಿಯರ್‌ಗಳಿಂದ ಅರ್ಜಿ

Update: 2016-06-24 05:46 GMT

ಉದ್ಯೋಗದ ಕ್ಷೇತ್ರದಲ್ಲಿ ಮೋದಿ ಸರ್ಕಾರವು ಎದುರಿಸುತ್ತಿರುವ ಸವಾಲಿಗೆ ದ್ಯೋತಕವಾಗಿ 34 ಪಿಎಚ್‌ಡಿ ಮಾಡಿದ ವ್ಯಕ್ತಿಗಳು ಮತ್ತು 12,000 ಇಂಜಿನಿಯರ್‌ಗಳು ಮಧ್ಯಪ್ರದೇಶ ಸರ್ಕಾರ ಜಾಹೀರಾತು ನೀಡಿದ ನಾಲ್ಕನೇ ದರ್ಜೆಯ ಸರ್ಕಾರಿ ಉದ್ಯೋಗಕ್ಕಾಗಿ ಅರ್ಜಿ ಹಾಕಿದ್ದರು. ಈ ಉದ್ಯೋಗಕ್ಕೆ ಅರ್ಹತೆ ಕೇಳಿದ್ದು ಕೇವಲ 10ನೇ ತರಗತಿ ಎನ್ನುವುದು ಆಘಾತಕಾರಿ.


ಕಳೆದ ವಾರ ಮಹಾರಾಷ್ಟ್ರದಲ್ಲಿ ಕೂಲಿ ಅಥವಾ ಸಹಾಯಕ್ ಕೆಲಸಕ್ಕಾಗಿ ಪದವೀದರರು, ಸ್ನಾತಕೋತ್ತರರು ಮತ್ತು ಎಂಫಿಲ್ ಡಿಗ್ರಿ ಹೊಂದಿರುವವರು ಸುಮಾರು 2424 ಅಭ್ಯರ್ಥಿಗಳು ಅರ್ಜಿ ಹಾಕಿದ್ದರು. ರೈಲ್ವೇ ಪೋರ್ಟರ್ ಹುದ್ದೆಗೆ ಕನಿಷ್ಠ ಅರ್ಹತೆ ನಾಲ್ಕನೇ ತರಗತಿ ಪಾಸ್ ಆಗಿರುವುದು ಆಗಿದೆ. ಕಳೆದ ವರ್ಷ 23 ಲಕ್ಷ ಮಂದಿ ಉತ್ತರ ಪ್ರದೇಶದ ಸೆಕ್ರೆಟರಿಯೇಟ್‌ನ ಪಿಯೋನ್‌ಗಾಗಿ ಕರೆದ 368 ಹುದ್ದೆಗಳಿಗೆ ಅರ್ಜಿ ಹಾಕಿದ್ದರು.

ಈ ನಡುವೆ ಮಧ್ಯಪ್ರದೇಶ ಕಾಂಗ್ರೆಸ್ ಪಕ್ಷವು ದೇಶದಲ್ಲಿ ನಿರುದ್ಯೋಗ ಹೆಚ್ಚಾಗುತ್ತಿರುವ ಬಗ್ಗೆ ಮೋದಿ ಸರ್ಕಾರದ ಮೇಲೆ ಟೀಕಾಪ್ರಹಾರ ಮಾಡಿದೆ. ನಿರುದ್ಯೋಗ ಯಾವ ಮಟ್ಟಿಗೆ ಇದೆ ಎನ್ನುವುದನ್ನು ಇದೇ ತೋರಿಸುತ್ತದೆ. ಮೋದಿ ಸರ್ಕಾರ ಮತ್ತು ಮಧ್ಯಪ್ರದೇಶ ಸರ್ಕಾರಗಳೆರಡೂ ಸೋತಿವೆ ಎಂದು ಪಕ್ಷ ಹೇಳಿದೆ. ನಿರೀಕ್ಷೆಯಂತೆ ರಾಜ್ಯ ಬಿಜೆಪಿ ನಾಯಕತ್ವ ಈ ಆರೋಪವನ್ನು ನಿರಾಕರಿಸಿದೆ. ಮೋದಿ ಸರ್ಕಾರವು ಯುವಕರ ಕಲ್ಯಾಣಕ್ಕಾಗಿ ಕೆಲಸ ಮಾಡುತ್ತದೆ. ನಿಧಾನವಾಗಿ ನೀವು ವ್ಯತ್ಯಾಸವನ್ನು ಕಾಣುವಿರಿ ಎಂದು ಪಕ್ಷದ ನಾಯಕ ಅಲೋಕ್ ಸಂಜಾರ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News