ಮೋದಿ ವೈಫಲ್ಯದ ಬಗ್ಗೆ ’ಫೇಕುಜಿ ಹ್ಯಾವ್ ದಿಲ್ಲಿ ಮಾ ’ ಗುಜರಾತ್‌ ಪುಸ್ತಕ ಬರೆದ ಶಾ

Update: 2016-06-25 06:04 GMT

ಅಹ್ಮದಾಬಾದ್‌, ಜೂ.25: ಪ್ರಧಾನ ಮಂತ್ರಿ ನರೇಂದ್ರ ಮೋದಿ  ವೈಫಲ್ಯದ ಬಗ್ಗೆ ಗುಜರಾತ್‌ನಲ್ಲಿ ಹೊರ ಬಂದಿರುವ ಜೆ.ಆರ್ ಶಾ ಅವರ ಕೃತಿ(ಫೇಕುಜಿ ಹ್ಯಾವ್ ದಿಲ್ಲಿ ಮಾ)ಯನ್ನು  ನಿಷೇಧಿಸುವಂತೆ ಮೋದಿ ಬೆಂಬಲಿಗ ನರಸಿಂಹಬಾಯ್‌  ಸೋಲಂಕಿ ಸ್ಥಳೀಯ ನ್ಯಾಯಾಲಯದಲ್ಲಿ ದಾವೆ ಹೂಡಿದ್ದಾರೆ.


ಮೋದಿ 2014ರ ಸಾರ್ವತ್ರಿಕ ಚುನಾವಣೆಯ ಸಂದರ್ಭದಲ್ಲಿ ನೀಡಿರುವ ಭರವಸೆಗಳನ್ನು ಈಡೇರಿಸುವಲ್ಲಿ ವಿಫಲರಾಗಿದ್ದಾರೆ ಎಂದು  ಪಾಲ್ದಿ ನಿವಾಸಿ ಜೆ.ಆರ‍್ ಶಾ ಹೊರತಂದಿರುವ ಕೃತಿಯಲ್ಲಿ ಬರೆದಿದ್ದಾರೆ.
ಬೃಹ್ಮಾಪುರದ ನಿವಾಸಿ ಸೋಲಂಕಿ ವೃತ್ತಿಯಲ್ಲಿ ಸಮಾಜ ಸೇವಕರಾದ್ದಾರೆ. " ಕೃತಿಯಲ್ಲಿ  ಮಾನಹಾನಿಕರ ವಿಚಾರಗಳಿವೆ. ಪ್ರಧಾನ ಮಂತ್ರಿ ಮತ್ತು ಬೆಂಬಲಿಗರ ಭಾವನೆಗಳಿಗೆ ಧಕ್ಕೆ ಉಂಟಾಗಿದೆ. ಆದುದರಿಂದ ಈ ಕೃತಿಯನ್ನು ನಿಷೇಧಿಸುವಂತೆ  ಸೋಲಂಕಿ ಪರ ವಕೀಲರಾದ ಎಂಎಸ್‌ ಭಾವ್‌ಸಾರ‍್  ನ್ಯಾಯಾಲಯಕ್ಕೆ ಮನವಿ ಮಾಡಿದ್ದಾರೆ.


"ಪ್ರಧಾನ ಮಂತ್ರಿ ನರೇಂದ್ರ ಮೋದಿ ನಾಯಕತ್ವದ ಕೇಂದ್ರ ಸರಕಾರ ಅಧಿಕಾರಕ್ಕೆ  ಬಂದು ಎರಡು ವರ್ಷವಾಗಿದೆ. ಅಷ್ಟು ಕಡಿಮೆ ಅವಧಿಯಲ್ಲಿ ದೇಶದ ಅಭಿವೃದ್ಧಿಯಲ್ಲಿ ಬದಲಾವಣೆ ಅಸಾಧ್ಯ ಎಂದು ಭಾವ್‌ಸಾರ್‌ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News