58 ಕೋಟಿ ರೂ. ಸರಕಾರಿ ಅಂದಾಜಿನ ರಸ್ತೆಯನ್ನು 50 ಲಕ್ಷ ರೂ. ಗೆ ನಿರ್ಮಿಸಿದ 600 ಗ್ರಾಮಸ್ಥರು !

Update: 2016-06-25 18:48 GMT

ರಾಂಚಿ, ಜೂನ್.25 : ಜಾರ್ಖಂಡ್ ರಾಜ್ಯದ ಹತ್ತುಹಳ್ಳಿಗಳ ಸುಮಾರು 600 ಗ್ರಾಮಸ್ಥರುಒಟ್ಟಾಗಿ 20 ಕಿ.ಮಿ. ಉದ್ದದ ರಸ್ತೆಯನ್ನು ನಿರ್ಮಿಸಿ ಎಲ್ಲರಿಗೂ ಮಾದರಿಯಾಗಿದ್ದಾರೆ. ಈರಸ್ತೆ ಕಾಮಗಾರಿಗೆ ಸರಕಾರ ರೂ 58 ಕೋಟಿ ಅಂದಾಜು ವೆಚ್ಚವಾಗಬಹುದೆಂದಿದ್ದರೆ, ಗ್ರಾಮಸ್ಥರು ಈ ರಸ್ತೆಯನ್ನು ಕೇವಲ ರೂ 50 ಲಕ್ಷಕ್ಕೆ ನಿರ್ಮಿಸಿದ್ದಾರೆಂದು ನ್ಯೂಸ್ 24 ವರದಿ ಮಾಡಿದೆ. ಹಳ್ಳಿಗಳ ನಡುವಿನ ಸಂಪರ್ಕ ರಸ್ತೆಯನ್ನು ಸರಕಾರ ನಿರ್ಮಿಸಲು ವಿಫಲವಾಗಿದ್ದುದರಿಂದ ಈ ಕಾರ್ಯವನ್ನು ಗ್ರಾಮಸ್ಥರು ತಾವೇ ಕೈಗೆತ್ತಿಕೊಂಡು ಸರಕಾರಕ್ಕೆ ಹಲವಾರು ಕೋಟಿ ರೂಪಾಯಿ ಉಳಿತಾಯ ಮಾಡಿದ್ದಾರೆ.ಪ್ರತಿಯೊಬ್ಬ ಗ್ರಾಮಸ್ಥನಿಂದ ಸಂಗ್ರಹಿಸಲಾಗಿದ್ದ ಹಣದಿಂದಈ ರಸ್ತೆ ನಿರ್ಮಿಸಲಾಗಿದೆ.

ಈ 20 ಕಿಮಿ ರಸ್ತೆಯ ಹೊರತಾಗಿ ಗ್ರಾಮಸ್ಥರು ಕೊಯ್ಲಾ ನದಿಗೆ ಅಡ್ಡಲಾಗಿ 100 ಅಡಿ ಅಗಲದ ಸೇತುವೆಯೊಂದನ್ನೂ ನಿರ್ಮಿಸಿದ್ದಾರೆ. ಈ ಪ್ರದೇಶದಲ್ಲಿ 1996 ರಲ್ಲಿ ದೋಣಿಯೊಂದು ಮುಳುಗಡೆಯಾಗಿಆರು ಮಂದಿಬಲಿಯಾದಂದಿನಿಂದ ಗ್ರಾಮಸ್ಥರು ಇಲ್ಲಿ ಸೇತುವೆಗಾಗಿ ಬೇಡಿಕೆಯಿಟ್ಟಿದ್ದರು.
ಮಾವೋ ಹಿಂಸೆ ಹಾಗೂ ಸರಕಾರಿ ಅಧಿಕಾರಿಗಳ ನಿರ್ಲಕ್ಷ್ಯದಿಂದ ಬೇಸತ್ತ ಗ್ರಾಮಸ್ಥರ ಈಮಹೋನ್ನತ ಕಾರ್ಯದಿಂದ ಈಗ ಗಮ್ಹರಿಯಾ, ರೇಲಾ, ಖಜೂರಿಯಾ, ಪರಾಲ್, ಕಾರ, ಬಡಗುವಾ ಹಾಗೂ ಪೋಪ್ ಕಡಾ ಗ್ರಾಮಗಳಿಗೆ ಸಂಪರ್ಕ ರಸ್ತೆಗಳು ಸಿಕ್ಕಂತಾಗಿದೆ.
ಈ ರಸ್ತೆ ಕಾಮಗಾರಿಯನ್ನು ಫೆಬ್ರವರಿ 28 ರಲ್ಲಿ ಆರಂಭಿಸಲಾಗಿದ್ದು ದಾಖಲೆ ಸಮಯದಲ್ಲಿ ಪೂರ್ಣಗೊಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News