ಮೋದಿ ಸರಕಾರ ನನ್ನ ಐಡಿಯವನ್ನು ಕದ್ದಿದೆ: ರಾಜಸ್ಥಾನದ ಮಹಿಳಾ ಪೊಲೀಸ್ ಅಧಿಕಾರಿ ಆರೋಪ

Update: 2016-06-27 11:30 GMT

ಹೊಸದಿಲ್ಲಿ, ಜೂನ್ 27: ರಾಜಸ್ಥಾನ ಮಹಿಳಾ ಪೊಲೀಸ್ ಅಧಿಕಾರಿಯೊಬ್ಬರು ತನ್ನ ಐಡಿಯವನ್ನು ಕದ್ದಿರುವುದಾಗಿ ಮೋದಿ ಸರಕಾರದ ವಿರುದ್ಧ ಆರೋಪಿಸಿದ್ದಾರೆ. ಮೋದಿ ಸರಕಾರದ ಬಹುಚರ್ಚಿತ ಬೇಟಿ ಪಡಾವೋ ಬೇಟಿ ಬಚಾವೋ ಘೋಷಣೆ ಅವರ ಚಿಂತನೆಯ ಕೊಡುಗೆಯಾಗಿದೆ. ಇದನ್ನು ಕೇಂದ್ರಸರಕಾರ ಕಳೆದ ವರ್ಷ ಹೆಮ್ಮಕ್ಕಳನ್ನು ರಕ್ಷಿಸುವ ಮತ್ತು ಅವರಿಗೆ ಕಲಿಸುವ ಪ್ರಚಾರಕ್ಕೆ ಬಳಸಿಕೊಂಡಿದೆ.

ಟೈಮ್ಸ್ ಇಂಡಿಯಾದ ವರದಿ ಪ್ರಕಾರ ಉದಯ ಪುರದ ಮಹಿಳಾ ಪೊಲೀಸ್ ಠಾಣೆಯ ಎಸ್‌ಎಚ್‌ಒ ಚೇತನಾಭಾಟಿ ಪ್ರಧಾನಿಗೆ ಪತ್ರ ಬರದು ತನ್ನ ರಚನಾತ್ಮಕತೆಗೆ ಮಾನ್ಯತೆ ನೀಡಬೇಕೆಂದು ಆಗ್ರಹಿಸಿದ್ದಾರೆ. ಚೇತಾನ ಈ ಕುರಿತು ಮುಖ್ಯಮಂತ್ರಿಗೆ ಆರ್‌ಟಿಐ ಲೆಟರ್ ಕಳುಹಿಸಿ ಮಾಹಿತಿ ಕೇಳಿದ್ದರು. ಆದರೆ ಇದು ಯಾರ ರಚನೆ ಎಂಬ ಸಮರ್ಪಕ ಉತ್ತರ ಬಂದಿರಲಿಲ್ಲ. ಇತಿಹಾಸ ಮತ್ತು ಇಂಗ್ಲಿಷ್‌ನಲ್ಲಿ ಪಿಜಿ ಡಿಗ್ರಿ ಮಾಡಿರುವ ಚೇತನಾ ಭಾಟಿ 20ವರ್ಷ ಮೊದಲು ಪೊಲೀಸ್ ಇಲಾಖೆಗೆ ಮೊದಲು ಶಿಕ್ಷಕಿಯಾಗಿದ್ದರು. 1999ರಲ್ಲಿ ಮೊದಲ ಬಾರಿ ಇವರು ಈ ವಾಕ್ಯವನ್ನು ಬರೆದಿದ್ದರು.. ಮತ್ತು ಕವಿತಾ ಸಂಕಲನದಲ್ಲಿ ಇದನ್ನು ಬಳಸಿದ್ದರು. 2005ರಲ್ಲಿ ಒಂದು ಕಾರ್ಯಕ್ರಮದಲ್ಲಿ ಇದನ್ನು ಬಳಸಿದ್ದರು. ಇದಕ್ಕೆ ಬದಲಾಗಿ ತನಗೆ ಹಣವೋ ಪ್ರಚಾರವೋ ಬೇಕಿಲ್ಲ ಆದರೆ ತನ್ನ ಮಹತ್ವವನ್ನು ಗುರುತಿಸಬೇಕೆಂದು ಚೇತನಾ ಭಾಟಿ ಹೇಳುತ್ತಿದ್ದಾರೆ.

ಭಾಟಿ ಇದಕ್ಕೆ ಸಂಬಂಧಿಸಿ ಆರ್‌ಟಿಐ ಅರ್ಜಿಯನ್ನು ಪ್ರಧಾನಿ ಗೆ ಕಳುಹಿಸಿದ್ದರು. ಅಲ್ಲಿಂದ ಅದನ್ನು ಮಹಿಳೆ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಕಳುಹಿಸಲಾಯಿತು. ಅಲ್ಲಿಂದ ಅದನ್ನು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಶಿಕ್ಷಣ ವಿಭಾಗಕ್ಕೆ ಕಳುಹಿಸಲಾಯಿತು. ಎಲ್ಲಿಂದಲೂ ಸರಿಯಾದ ಉತ್ತರ ಸಿಕ್ಕಿಲ್ಲ. ಚೇತನಾ 2002ರಲ್ಲಿ ನಾಗಪುರದಲ್ಲಿದ್ದಾಗ ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್‌ಗೆ ಪತ್ರ ಬರೆದು ಹೆಮ್ಮಕ್ಕಳ ವಿಷಯದಲ್ಲಿ ತಾನು ತಯಾರಿಸಿದ ಕೆಲವು ಪೊಸ್ಟರ್‌ಗಳನ್ನು ಪ್ರಚಾರ ಮಾಡಬೇಕೆಂದು ಕೇಳಿಕೊಂಡಿದ್ದರು. ಆದರೆ ಉತ್ತರ ಸಿಕ್ಕಿರಲಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News