ಕಪ್ಪುಹಣ ಗವಾಕ್ಷಿ: ಇಂದು ಕೈಗಾರಿಕಾ ಚೇಂಬರ್‌ಗಳು ಮತ್ತು ಸಿಎಗಳ ಜೊತೆ ವಿತ್ತಸಚಿವ ಜೇಟ್ಲಿ ಮಾತುಕತೆ

Update: 2016-06-27 14:14 GMT

ಹೊಸದಿಲ್ಲಿ,ಜೂ.27: ದೇಶಿಯವಾಗಿ ಕಪ್ಪುಹಣ ಮತ್ತು ಅಘೋಷಿತ ಆಸ್ತಿಗಳನ್ನು ಹೊಂದಿರುವವರು ಅದನ್ನು ಘೋಷಿಸಲು ಒಂದು ಬಾರಿಗೆ ನೀಡಲಾಗಿರುವ ನಾಲ್ಕು ತಿಂಗಳ ಕಾಲಾವಕಾಶದ ಕುರಿತು ಯಾವುದೇ ಶಂಕೆಗಳನ್ನು ಮತ್ತು ತಪ್ಪು ತಿಳುವಳಿಕೆಗಳನ್ನು ನಿವಾರಿಸಲು ವಿತ್ತಸಚಿವ ಅರುಣ್ ಜೇಟ್ಲಿ ಅವರು ಮಂಗಳವಾರ ಕೈಗಾರಿಕಾ ಸಂಘಗಳು,ಲೆಕ್ಕ ಪರಿಶೋಧಕರು ಮತ್ತು ಇತರ ವೃತ್ತಿಪರರೊಂದಿಗೆ ಮಾತುಕತೆ ನಡೆಸಲಿದ್ದಾರೆ.

ಕಪ್ಪುಹಣ ಘೋಷಣೆಗೆ ಸೆ.30ರವರೆಗೆ ಕಾಲಾವಕಾಶವಿದ್ದು, ಯೋಜನೆಯ ಯಶಸ್ಸಿಗಾಗಿ ಆದಾಯ ತೆರಿಗೆ ಇಲಾಖೆಯು ಈಗಾಗಲೇ ನಾಲ್ಕು ಆಯಾಮಗಳ ಕಾರ್ಯತಂತ್ರವೊಂದನ್ನು ರೂಪಿಸಿದೆ.

ದೇಶಿಯವಾಗಿ ಕಪ್ಪುಹಣವನ್ನು ಹೊಂದಿದವರು ಅದನ್ನು ಘೋಷಿಸಿ ದಂಡ ಮತ್ತು ತೆರಿಗೆ ಪಾವತಿಯೊಂದಿಗೆ ಚಿಂತೆಗಳಿಂದ ಮುಕ್ತರಾಗಲು ಜೇಟ್ಲಿ ಮುಂಗಡಪತ್ರದಲ್ಲಿ ಜೂನ್ 1ರಿಂದ ನಾಲ್ಕು ತಿಂಗಳು ಅವಧಿಯ ಆದಾಯ ಘೋಷಣೆ ಯೋಜನೆ(ಐಡಿಎಸ್) 2016ನ್ನು ಪ್ರಕಟಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News