ಮೂವರು ಸೋದರರಿಂದ ಬಾಲಕಿಯ ಮೇಲೆ ಅತ್ಯಾಚಾರ

Update: 2016-06-27 18:31 GMT

ನಾಗಪುರ, ಜೂ.27: ನಗರದ ಕೊಳೆಗೇರಿಯೊಂದರಲ್ಲಿ ಇಬ್ಬರು ಅಪ್ರಾಪ್ತ ವಯಸ್ಕರು ಸೇರಿದಂತೆ ಮೂವರು ಸಹೋದರರು 13ರ ಹರೆಯದ ಹುಡುಗಿಯೊಬ್ಬಳ ಮೇಲೆ ಆಕೆಯ ಮನೆಯಲ್ಲಿ ಸಾಮೂಹಿಕ ಅತ್ಯಾಚಾರ ನಡೆಸಿದ ಹೇಯ ಘಟನೆಯೊಂದು ನಡೆದಿದೆಯೆಂದು ಪೊಲೀಸರಿಂದು ತಿಳಿಸಿದ್ದಾರೆ.

ಹಿರಿಯ ಸಂಜಯ ಅಲಿಯಾಸ್ ಲೌಕೇಶ್ ಮೋಹನ್ ವರ್ಮ(21) ಸಹಿತ ಮೂವರು ಆರೋಪಿಗಳೂ ಗಣೇಶಪೇಟ್ ಪ್ರದೇಶದ ಇಂದಿರಾನಗರ ಕೊಳೆಗೇರಿಯ ನಿವಾಸಿಗಳಾಗಿದ್ದಾರೆ. ನಿನ್ನೆ ಅಪ್ರಾಪ್ತ ವಯಸ್ಕ ಬಾಲಕಿ ಒಬ್ಬಳೇ ಇದ್ದ ಸಮಯ ಅವರು ಆಕೆಯ ಮನೆಗೆ ನುಗ್ಗಿ, ಒಬ್ಬರ ಬಳಿಕೊಬ್ಬರು ಅತ್ಯಾಚಾರ ನಡೆಸಿ ಸ್ಥಳದಿಂದ ಪರಾರಿಯಾಗಿದ್ದರೆಂದು ಪೊಲೀಸರು ವಿವರಿಸಿದ್ದಾರೆ.
ಬಾಲಕಿಯ ಮೇಲೆ ಅತ್ಯಾಚಾರ ನಡೆದುದು ವೈದ್ಯಕೀಯ ಪರೀಕ್ಷೆಯಲ್ಲಿ ಖಚಿತವಾಗಿದೆ. 12 ಹಾಗೂ 17ರ ಹರೆಯದ ಬಾಲಾಪರಾಧಿಗಳನ್ನು ಬಂಧಿಸಲಾಗಿದ್ದು, ಸಂಜಯ್ ತಲೆ ಮರೆಸಿಕೊಂಡಿದ್ದಾನೆಂದು ಅವರು ಹೇಳಿದ್ದಾರೆ.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News