27 ಬುಡಕಟ್ಟು ವಿದ್ಯಾರ್ಥಿಗಳು ಐಐಟಿ ಪ್ರವೇಶ ಪರೀಕ್ಷೆಯಲ್ಲಿ ಉತ್ತೀರ್ಣ

Update: 2016-06-27 18:36 GMT

ರಾಯ್ಪುರ, ಜೂ.27: ಛತ್ತೀಸ್‌ಗಡದ ನಕ್ಸಲ್ ಪೀಡಿತ ಪ್ರದೇಶದಿಂದ ಪಾರಾಗಿ, ಸರಕಾರಿ ಸ್ವಾಮ್ಯದ ‘ಪ್ರಯಾಸ್’ ಕಾರ್ಯಕ್ರಮದಲ್ಲಿ ಬೆಳೆದ 27 ಮಂದಿ ಬುಡಕಟ್ಟು ವಿದ್ಯಾರ್ಥಿಗಳು ಈ ವರ್ಷದ ಪ್ರತಿಷ್ಠಿತ ಭಾರತೀಯ ತಂತ್ರಜ್ಞಾನ ಸಂಸ್ಥೆಯ(ಐಐಟಿ) ಪ್ರವೇಶ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ.

ರಾಜ್ಯದ ಅತೀ ಹೆಚ್ಚು ಹಿಂಸಾಗ್ರಸ್ತ ಪ್ರದೇಶಗಳ ಮಕ್ಕಳಿಗಾಗಿರುವ ಮುಖ್ಯಮಂತ್ರಿ ಬಾಲ ಭವಿಷ್ಯ ಸುರಕ್ಷಾ ಯೋಜನೆಯ ವಿಸ್ತರಣೆಯಾಗಿರುವ ಪ್ರಯಾಸ್ ಸನಿವಾಸ ಶಾಲೆಗಳನ್ನು ರಾಜ್ಯ ಸರಕಾರವು 2010ರಲ್ಲಿ ಆರಂಭಿಸಿತ್ತು.
ಯಶಸ್ವಿ ವಿದ್ಯಾರ್ಥಿಗಳಿಂದು ಸಹನೆ ಹಾಗೂ ಅವಿರತ ಪ್ರಯತ್ನಗಳಿಗೆ ಉದಾಹರಣೆಯಾಗಿದ್ದಾರೆ. ಆದರೆ, ಪ್ರಯಾಸ್ ಅವರನ್ನು ಆರಿಸುವ ಮೊದಲು ಈ ವಿದ್ಯಾರ್ಥಿಗಳ ಜೀವನ ಸುಲಭದ್ದಾಗಿರಲಿಲ್ಲ.
 ಪ್ರವೇಶ ಪರೀಕ್ಷೆಲ್ಲಿ 1141ನೆ ರ್ಯಾಂಕ್ ಪಡೆದಿರುವ 18ರ ಹರೆದ ಸೋಡಿದೇವ ಎಂಬಾತ ಕೆಲವು ವರ್ಷಗಳ ಮೊದಲು ಗಲಭೆ ಪೀಡಿತ ಸುಕ್ಮಾ ಜಿಲ್ಲೆಯಿಂದ ಬಲವಂತವಾಗಿ ಹೊರಗೆ ಕಳುಹಿಸಲ್ಪಟ್ಟವನಾಗಿದ್ದಾರೆ. ಆತನ ಕುಟುಂಬದ ಒಬ್ಬ ಸದಸ್ಯನನ್ನು ಮಾವೊವಾದಿ ಕೂಟಕ್ಕೆ ಕಳುಹಿಸಬೇಕೆಂಬ ನಕ್ಸಲರ ಬೇಡಿಕೆಯನ್ನು ತಿರಸ್ಕರಿಸಿದ್ದುದರಿಂದಾಗಿ ಅವರು ಸೋಡಿ ದೇವನ ಮನೆಯನ್ನು ನಾಶಗೊಳಿಸಿದ್ದರು.
‘‘ನಾವು ಇನ್ನೊಮ್ಮೆ ನಕ್ಸಲೀಯರ ಗುರಿಯಾಗಲು ಬಯಸುವುದಿಲ್ಲ. ಆದುದರಿಂದ ನಾನು ಪ್ರಯಾಸ್‌ಗೆ ಸೇರಿದೆ. ಅದು ನನಗೆ ಎಲ್ಲಿ ನಿಲ್ಲಬೇಕೆಂಬ ಕುರಿತು ಧನಾತ್ಮಕ ಭದ್ರತೆಯನ್ನು ಹಾಗೂ ವಾಸ್ತವ ಸ್ಥಾನವನ್ನು ನೀಡಿತು’’ ಎಂದು ದೇವಾ ಎಚ್‌ಟಿಗೆ ತಿಳಿಸಿದ್ದಾನೆ.
 ಪ್ರಯಾಸ್‌ನಲ್ಲಿ ವಿವಿಧ ನಕ್ಸಲ್ ಪೀಡಿತ ಹಾಗೂ ಬುಡಕಟ್ಟು ಜಿಲ್ಲೆಗಳ ಶಾಲೆಗಳಿಂದ ವಿದ್ಯಾರ್ಥಿಗಳನ್ನು, ಅವರು 10ನೆಯ ತರಗತಿಯ ವರೆಗೆ ಮಾಡಿರುವ ಶೈಕ್ಷಣಿಕ ಸಾಧನೆಯ ಆಧಾರದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಆರಿಸಲಾಗುತ್ತದೆ. ಅವರನ್ನು ಮತ್ತೆ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಅಗ್ರಗಣ್ಯರಾಗುವಂತೆ ಬೆಳೆಸಲಾಗುತ್ತದೆ.
2012 ಹಾಗೂ 2015ರ ನಡುವೆ, ಅದರ 9 ವಿದ್ಯಾರ್ಥಿಗಳು ಐಐಟಿಗೆ ಪ್ರವೇಶ ಪಡೆದಿದ್ದರು. ಆದರೆ, ಈ ವರ್ಷದ ಫಲಿತಾಂಶ ಆನಂದಾಶ್ಚರ್ಯ ತಂದಿದೆ. 27 ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ. ಅಲ್ಲದೆ, ಇನ್ನೂ 150 ವಿದ್ಯಾರ್ಥಿಗಳು ದೇಶದ ವಿವಿಧ ಇಂಜಿನಿಯರಿಂಗ್ ಕಾಲೇಜುಗಳಿಗೆ ಸೇರುವ ಅರ್ಹತೆ ಪಡೆದಿದ್ದಾರೆ.
ಮೊದಲ ಬಾರಿ ಮನೆ ಬಿಟ್ಟಿದ್ದ ವಿದ್ಯಾರ್ಥಿಗಳು ಮೊದಲು ಕಾತರಕ್ಕೊಳಗಾಗಿದ್ದರು. ಆದರೆ, ಎಲ್ಲರೂ ಒಂದೇ ರೀತಿಯ ಹಿನ್ನೆಲೆಯವರಾಗಿದ್ದುದರಿಂದ ಸ್ನೇಹ ಬೆಳೆಯಲು ಸಮಯ ಹಿಡಿಯಲಿಲ್ಲವೆಂದು ಈ ವಿದ್ಯಾರ್ಥಿಗಳ ಸಾಧನೆಗೆ ಮುಖ್ಯಮಂತ್ರಿ ರಮಣ್ ಸಿಂಗ್ ಮೆಚ್ಚುಗೆ ವ್ಯಕ್ತಪಡಿಸಿದ್ದು, ಪ್ರತಿಯೊಬ್ಬನಿಗೂ ಒಂದೊಂದು ಲ್ಯಾಪ್‌ಟಾಪ್ ಬಹುಮಾನ ನೀಡಿದ್ದಾರೆ. ಪ್ರಯಾಸ್ ಶಾಲೆಗಳು ರಾಯ್ಪುರ, ಬಿಲಾಸ್ಪುರ, ಜಗದಾಲ್ಪುರ ಹಾಗೂ ಅಂಬಿಕಾಪುರಗಳಲ್ಲಿ ಕಾರ್ಯಾಚರಿಸುತ್ತಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News