ಎಟಿಎಂ ಕಲೆಕ್ಷನ್ ಸೆಂಟರ್‌ನಿಂದ 9 ಕೋ.ರೂ. ಲೂಟಿ

Update: 2016-06-28 08:20 GMT

ಥಾಣೆ, ಜೂ.28: ಮಹಾರಾಷ್ಟ್ರದ ಥಾಣೆಯಲ್ಲಿ ಎಟಿಎಂ ಕಲೆಕ್ಷನ್ ಸೆಂಟರ್‌ನಿಂದ 9 ಕೋಟಿ. ರೂ. ಲೂಟಿ ಮಾಡಿರುವ ಘಟನೆ ನಡೆದಿದೆ. ದರೋಡೆಕೋರರು ಈ ಕೃತ್ಯಕ್ಕೆ ಮೊದಲು ಸಿಸಿಟಿವಿ ಕ್ಯಾಮರಾವನ್ನು ಕಿತ್ತು ತೆಗೆದಿದ್ದರು.

ಬ್ಯಾಂಕ್‌ಗಳಿಂದ ಎಟಿಎಂಗಳಿಗೆ ಹಣ ಪೂರೈಸುವ ಚೆಕ್‌ಮೇಟ್ ಕ್ಯಾಶ್ ಮ್ಯಾನೇಜ್‌ಮೆಂಟ್ ಸರ್ವಿಸಸ್ ನಡೆಸುತ್ತಿರುವ ಎಟಿಎಂ ಕಲೆಕ್ಷನ್ ಸೆಂಟರ್‌ನಲ್ಲಿ ದರೋಡೆ ಘಟನೆ ನಡೆದಿದೆ.

ಆರು ಜನರಿದ್ದ ದರೋಡೆಕೋರರ ಗುಂಪು ಮುಸುಕು ಹಾಕಿಕೊಂಡು ಬ್ಯಾಂಕ್‌ನ್ನು ಪ್ರವೇಶಿಸಿದ್ದಾರೆ. ಅವರ ಕೈಯ್ಯಲ್ಲಿ ಗನ್ ಹಾಗೂ ಚೂರಿಗಳಿದ್ದವು. ದರೋಡೆ ಕೃತ್ಯಕ್ಕೆ ಮೊದಲು ಸಿಸಿಟಿವಿ ಕ್ಯಾಮರಾವನ್ನು ಕಿತ್ತಿಟ್ಟುಕೊಂಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಆರಂಭದಲ್ಲಿ 12 ಕೋಟಿ ರೂ.ಲೂಟಿಯಾಗಿದೆ ಎಂದು ಅಂದಾಜಿಸಲಾಗಿತ್ತು. ಎಣಿಕೆಯ ಬಳಿಕ 9.16 ಕೋ.ರೂ. ಲೂಟಿಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News