ಮುಂಬೈ: ಪಾನಮತ್ತ ಯುವತಿಯ ‘ಪರಾಕ್ರಮ’ ವೀಡಿಯೊದಲ್ಲಿ

Update: 2016-06-29 06:33 GMT

ಮುಂಬೈ, ಜೂನ್ 29: ಗೆಳೆಯರೊಂದಿಗೆ ಮದ್ಯಪಾನ ಮಾಡಿ ಸ್ಥಿಮಿತ ಕಳಕೊಂಡ ಯುವತಿ ಪೊಲೀಸ್ ಠಾಣೆಯಲ್ಲಿ ನಡೆಸಿದ ಪರಾಕ್ರಮಗಳು ಬಹಿರಂಗವಾಗಿದೆ. ಮುಂಬೈ ವರ್ಲಿ ಪೊಲೀಸ್ ಠಾಣೆಯಲ್ಲಿ ಕಳೆದ ವಾರ ಈ ಘಟನೆ ನಡೆದಿತ್ತು. ಆರ್ಕಿಟೆಕ್ಚರ್ ವಿದ್ಯಾರ್ಥಿನಿಯಾದ ಗೌರಿ ಬೀಡ್ ಎಂಬ 21 ವರ್ಷದ ಯುವತಿ ಗೆಳೆಯರೊಂದಿಗೆ ಸೇರಿ ಮದ್ಯಪಾನ ಮಾಡಿ ಅತಿ ವೇಗದಲ್ಲಿ ಕಾರನ್ನು ಚಲಾಯಿಸಿ ವಿಭಾಜಕಕ್ಕೆ ಢಿಕ್ಕಿ ಹೊಡೆದು ನಂತರ ಕಾರು ಫುಟ್‌ಪಾತ್‌ಗೆ ಹತ್ತಿ ನಿಂತಿತ್ತು. ಪೊಲೀಸರು ವಶಕ್ಕೆ ಪಡೆದು ಠಾಣೆಗೆ ಕರೆತಂದಾಗ ಯುವತಿ ಪೊಲೀಸರ ಮೇಲೆ ಹಲ್ಲಗೆ ಯತ್ನಿಸಿದ್ದಾಳೆ ಎಂದು ವರದಿಯಾಗಿದೆ.

ಮದ್ಯದ ಅಮಲಿನಲ್ಲಿ ಪೊಲೀಸರ ಮೇಲೆ ಹಲ್ಲೆನಡೆಸಿದ ಯುವತಿ ಠಾಣೆಯ ಕಿಟಿಕಿ ಗಾಜು,ಕಂಪ್ಯೂಟರ್ ಮುಂತಾದ ವಸ್ತುಗಳನ್ನು ಮುರಿದು ಹಾಕಿದ್ದಾಳೆ. ಗೆಳೆಯರು ಯುವತಿಯನ್ನು ತಡೆಯಲು ಪ್ರಯತ್ನಿಸಿದರೂ ಪ್ರಯೋಜನ ಆಗಲಿಲ್ಲ. ಪೊಲೀಸರು ಘಟನೆಯನ್ನುಪೊಲೀಸರು ಚಿತ್ರಿಸಿದ್ದರಿಂದ ಅದು ಬಹಿರಂಗವಾಯಿತು. ನಂತರ ವೈದ್ಯಕೀಯ ತಪಾಸಣೆಗೆ ಗುರಿಪಡಿಸಿ ಯುವತಿಯನ್ನು ಒಂದು ದಿವಸ ವಶದಲ್ಲಿರಿಸಿ ಬಿಡುಗಡೆಗೊಳಿಸಲಾಯಿತು ಎಂದುಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News