ರಾಷ್ಟ್ರಧ್ವಜಕ್ಕೆ ಅವಮಾನ : ಪ್ರಧಾನಿ ಮೋದಿ ವಿರುದ್ಧ ದೂರು ದಾಖಲು

Update: 2016-06-29 10:23 GMT

ಪಾಟ್ನಾ, ಜೂ. 29: ರಾಷ್ಟ್ರಧ್ವಜಕ್ಕೆ ಅವಮಾನ ಮಾಡಿರುವುದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಬಿಹಾರದ ನ್ಯಾಯಾಲಯವೊಂದರಲ್ಲಿ ಮೊಕದ್ದಮೆ ದಾಖಲಾಗಿದೆ ಎಂದು ವಕೀಲರೊಬ್ಬರು ಬುಧವಾರ ತಿಳಿಸಿದರು.

ಮುಝಫ್ಫರ್‌ಪುರ ಜಿಲ್ಲೆಯ ಚೀಫ್ ಜುಡಿಶಿಯಲ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ಈ ಮೊಕದ್ದಮೆ ದಾಖಲಾಗಿದೆ.

ನ್ಯಾಯಾಲಯವು ವಿಚಾರಣೆಯ ದಿನಾಂಕವನ್ನು ಜುಲೈ 16ಕ್ಕೆ ನಿಗದಿಪಡಿಸಿದೆ.

ಜೂನ್ 21ರಂದು ನಡೆದ ಅಂತಾರಾಷ್ಟ್ರೀಯ ಯೋಗ ದಿನದಂದು ಅದರ ಮೇಲೆ ಕುಳಿತುಕೊಳ್ಳುವ ಮೂಲಕ ಹಾಗೂ ತನ್ನ ಕೈಗಳು ಮತ್ತು ಮುಖವನ್ನು ಒರೆಸಲು ಬಳಸುವ ಮೂಲಕ ಪ್ರಧಾನಿ ಅದನ್ನೊಂದು ಮಾಮೂಲಿ ಬಟ್ಟೆಯ ತುಂಡಿನಂತೆ ಕಂಡಿದ್ದಾರೆ ಹಾಗೂ ಆ ಮೂಲಕ ರಾಷ್ಟ್ರಧ್ವಜಕ್ಕೆ ಅವಮಾನ ಮಾಡಿದ್ದಾರೆ ಎಂದು ದೂರುದಾರ ಪೊಖ್‌ರೈರ ಗ್ರಾಮದ ನಿವಾಸಿ ಪ್ರಕಾಶ್ ಕುಮಾರ್ ಹೇಳಿದರು.

‘‘ಮೋದಿಯ ಕೃತ್ಯಗಳು ರಾಷ್ಟ್ರಧ್ವಜಕ್ಕೆ ಅವಮಾನ ಮಾಡುವಂಥದ್ದಾಗಿದೆ ಹಾಗೂ ಅದು ಕೋಟ್ಯಂತರ ಭಾರತೀಯರ ಭಾವನೆಗಳಿಗೆ ಹಾನಿ ಮಾಡಿದೆ’’ ಎಂದು ದೂರುದಾರರು ನುಡಿದರು.

ತನ್ನ ದೂರಿಗೆ ಪೂರಕವಾಗಿ ಅವರು ಇಂಟರ್‌ನೆಟ್‌ನಿಂದ ಡೌನ್‌ಲೋಡ್ ಮಾಡಲಾದ ಹಲವಾರು ಚಿತ್ರಗಳನ್ನು ಸಾಕ್ಷವಾಗಿ ಸಲ್ಲಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News