ಬಾಳಾ ಠಾಕ್ರೆಯಾಗಲಿದ್ದಾರೆ ಅಮಿತಾಬ್

Update: 2016-06-30 03:19 GMT

ಮುಂಬೈ, ಜೂ.30: ಬಿಗ್ ಬಿ ಸದ್ಯದಲ್ಲೇ ಹೊಸ ಅವತಾರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಠಾಕ್ರೆಯವರ ಆತ್ಮಚರಿತ್ರೆ ಕುರಿತ ಚಿತ್ರದಲ್ಲಿ ಖ್ಯಾತ ರಾಜಕಾರಣಿ ಹಾಗೂ ಶಿವಸೇನೆ ಸಂಸ್ಥಾಪಕ ಬಾಳಾಸಾಹೇಬ್ ಠಾಕ್ರೆ ಅವರ ಪಾತ್ರವನ್ನು ನಿರ್ವಹಿಸಲು ಅಮಿತಾಬ್ ಬಚ್ಚನ್ ಆಯ್ಕೆಯಾಗಿದ್ದಾರೆ. ಈ ಪಾತ್ರದ ನಟನ ಆಯ್ಕೆಗೆ ನಡೆದ ಸಮೀಕ್ಷೆಯಲ್ಲಿ ಶಾರುಖ್ ಖಾನ್, ಅಕ್ಷಯ್ ಕುಮಾರ್, ಮನೋಜ್ ಬಾಜಪೇಯಿಯಂಥ ಖ್ಯಾತನಾಮರನ್ನು ಹಿಂದಿಕ್ಕಿ ಈ ಹಿರಿಯ ನಟ ಆಯ್ಕೆಯಾಗಿದ್ದಾರೆ.

ಇತ್ತೀಚೆಗೆ ಮುಂಚೂಣಿ ಮನರಂಜನಾ ವೆಬ್‌ಸೈಟ್ ಈ ಸಂಬಂಧ ಸಮೀಕ್ಷೆ ನಡೆಸಿ, ನಾಯಕನಟನ ಆಯ್ಕೆಗೆ ಜನಾಭಿಪ್ರಾಯ ಸಂಗ್ರಹಿಸಿತ್ತು. ಈ ಚಿತ್ರದ ನಿರ್ಮಾಣಕ್ಕೆ ಪೂರ್ವಸಿದ್ಧತೆಗಳು ನಡೆಯುತ್ತಿದ್ದು, ಈ ವರ್ಷದ ಅಕ್ಟೋಬರ್ ವೇಳೆಗೆ ಚಿತ್ರ ನಿರ್ಮಾಣ ಕಾರ್ಯ ಆರಂಭವಾಗಲಿದೆ ಎಂದು ಮೂಲಗಳು ಹೇಳಿವೆ.

ರಾಹುಲ್ ಪ್ರೊಡಕ್ಷನ್ ಹೆಸರಿನಲ್ಲಿ ಈ ಚಿತ್ರ ನಿರ್ಮಾಣವಾಗುತ್ತಿದ್ದು, ಬಾಳಾ ಠಾಕ್ರೆಯವರ ಸೊಸೆ ಸ್ಮಿತಾ ಠಾಕ್ರೆ ಈ ಚಿತ್ರ ನಿರ್ಮಿಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News