ಮಅದನಿಗೆ ಕೇರಳಕ್ಕೆ ತೆರಳಲು ಸುಪ್ರೀಂ ಕೋರ್ಟ್ ಅನುಮತಿ

Update: 2016-06-30 09:45 GMT

 ಹೊಸದಿಲ್ಲಿ,ಜೂನ್ 30: ಅಬ್ದುಲ್ ನಾಸರ್ ಮಅದನಿ ಊರಿಗೆ ಹೋಗಿ,ರೋಗಿಯಾದ ತನ್ನ ತಾಯಿಯನ್ನುಕಾಣಲು ಸುಪ್ರೀಂಕೋರ್ಟ್ ಅನುಮತಿ ನೀಡಿದೆ. ಕೇರಳಕ್ಕೆ ಹೋಗಲು ಅನುಮತಿ ನೀಡಬೇಕೆಂದು ಆಗ್ರಹಿಸಿ ಮಅದನಿ ಸಲ್ಲಿಸಿದ ಅರ್ಜಿಯನ್ನು ಪರಿಗಣಿಸಿದ ಕೋರ್ಟ್ ಈ ಆದೇಶವನ್ನುನೀಡಿದೆ.

ಅದೇ ವೇಳೆ ಕೇರಳಕ್ಕೆ ಹೋಗುವ ಅನುಮತಿ ಎಷ್ಟು ದಿವಸಗಳವರೆಗೆ ನೀಡಬಹುದು ಎಂಬುದನ್ನು ವಿಚಾರಣಾ ಕೋರ್ಟ್ ತೀರ್ಮಾನಿಸಲಿದೆ ಎಂದು ಸುಪ್ರೀಂಕೋರ್ಟ್ ತಿಳಿಸಿದೆ. ವಿಚಾರಣೆ ಒಂದು ವರ್ಷದೊಳಗೆ ಮುಗಿಸಬೇಕೆಂದು ತಾಯಿಯ ರೋಗಗಳ ವಿವರವನ್ನು ದಾಖಲೆಗಳಲ್ಲಿ ಕೋರ್ಟಿಗೆ ತಿಳಿಸಲು ಕೋರ್ಟ್ ಆದೇಶಿಸಿದೆ.

ಮಅದನಿಗಾಗಿ ಹಿರಿಯ ವಕೀಲ ಪ್ರಶಾಂತ್ ಭೂಷಣ್‌ಕೋರ್ಟ್‌ಗೆ ಹಾಜರಾದರು. ಮಧುಮೇಹದಿಂದಾಗಿ ಹೆಚ್ಚು ಕಷ್ಟಪಡುತ್ತಿರುವ ಮಅದನಿಗೆ ವಿಚಾರಣೆ ಕೋರ್ಟ್ ಬರಹೇಳುವ ದಿವಸಗಳಲ್ಲಿ ಮಾತ್ರ ಹಾಜರಾದರೆ ಸಾಕೆಂದು ಕೋರ್ಟ್ ಸೂಚಿಸಿದೆ.

ಇದಕ್ಕಿಂತ ಮೊದಲು ಮಅದನಿಯ ಅರ್ಜಿಯನ್ನು ಪರಿಗಣಿಸಬಾರದೆಂದು ಕರ್ನಾಟಕ ಸರಕಾರ ಕೋರ್ಟ್‌ಗೆ ಮನವಿ ಮಾಡಿತ್ತು. ಕೇರಳಕ್ಕೆ ಹೋದರೆ ಸಾಕ್ಷಿಗಳ ಮೇಲೆ ಪ್ರಭಾವ ಬೀರಬಹುದೆಂದು ಕರ್ನಾಟಕ ವಾದಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News