ತ್ರಿಕೋನಕ್ಕೆ ನಾಲ್ಕು ಬದಿಗಳಿರುತ್ತವೆ ಎಂದ ಗುಜರಾತ್ ಹತ್ತನೇ ತರಗತಿಯ ಟಾಪರ್ !

Update: 2016-06-30 09:56 GMT

ಗಾಂಧಿನಗರ ಜೂನ್, 30:’ಆತ ಒಂದು ವೃತ್ತದಿಂದ ತ್ರಿಭುಜವನ್ನು ಗುರುತಿಸುವುದಿಲ್ಲ. ಇನ್ನೊಬ್ಬ ತ್ರಿಕೋನಕ್ಕೆ ನಾಲ್ಕು ಕೋನಗಳಿವೆ ಎನ್ನುತ್ತಾನೆ. ಮತ್ತು ಇನ್ನೊಬ್ಬ ಒಂದು ರೇಖೆಯಲ್ಲಿ ಎರಡು ಪೂರ್ಣಾಂಕವನ್ನು ಗುರುತಿಸಲು ವಿಫಲನಾಗುತ್ತಾನೆ. ಗುಜಾರಾತ್‌ಹತ್ತನೆ ತರಗತಿಯ ಐನೂರು ವಿದ್ಯಾರ್ಥಿಗಳಿಗೆ ಕೆಲವು ಪ್ರಶ್ನೆಗಳನ್ನು ಕೇಳಿದಾಗ ಉತ್ತರಿಸಲು ಕಷ್ಟಪಟ್ಟರು. ಗುಜರಾತ್ ಹೈಯರ್ ಸೆಕಂಡರಿ ಎಜುಕೇಶನ್ ಬೋರ್ಡ್ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳಿಂದ ನಕಲು ನಡೆದಿದೆ ಎಂಬ ಆರೋಪದ ಕುರಿತು ತನಿಖೆಗಾಗಿ ಈ ವಿದ್ಯಾರ್ಥಿಗಳನ್ನು ಕರೆಯಿಸಿಕೊಳ್ಳಲಾಗಿತ್ತು. ಈ ವಿದ್ಯಾರ್ಥಿಗಳಲ್ಲಿ ಗಣಿತದಲ್ಲಿ ಶೇ. 80ಕ್ಕೂ ಅಧಿಕ ಅಂಕಗಳಿಸಿದವರು ಇದ್ದರು. ಕೆಲವರು ಬಹು ಆಯ್ಕೆ ವಿಭಾಗಗಳಲ್ಲಿ ಶೇ.90-95ರಷ್ಟು ಮಾರ್ಕ್‌ಗಳಿಸಿದವರೂ ಇದ್ದರು.

ಮಾರ್ಚ್ 24ರಂದು ಪ್ರಕಟವಾದ ಪರೀಕ್ಷೆಯ ಫಲಿತಾಂಶದಲ್ಲಿ ಈ ವಿದ್ಯಾರ್ಥಿಗಳ ಸಬ್ಜೆಕ್ಟಿವ್ ವಿಭಾಗದಲ್ಲಿ ಫಲಿತಾಂಶ ಸೊನ್ನೆಯಾಗಿತ್ತು. ಈ ಹಿನ್ನೆಲೆಯಲ್ಲಿ ಅವರನ್ನು ವಿಚಾರಿಸಲು ಕರೆಯಿಸಿಕೊಳ್ಳಲಾಗಿತ್ತು.

    "ಟೀಚರ್‌ಗಳು ಪರೀಕ್ಷಾ ಹಾಲ್‌ನ ಸಿಸಿಟಿವಿಯ ಕೆಳಗೆ ಕೂತು ಅವರಿಗೆ ಉತ್ತರ ಹೇಳಿಕೊಡುತ್ತಿದ್ದರು. ಇನ್ನು ಕೆಲವರಿಗೆ ಕ್ಲಾಸ್ ರೂಂ ಕಿಟಕಿಯ ಹೊರಗಿನಿಂದ ಕೆಲವು ಧ್ವನಿಗಳು ಕೇಳಿಸುತ್ತಿತ್ತು" ಎಂದು ವಿದ್ಯಾರ್ಥಿಗಳನ್ನು ಪ್ರಶ್ನಿಸಿದ ಅಧಿಕಾರಿಗಳಿಗೆ ವಿದ್ಯಾರ್ಥಿಗಳು ಹೇಳಿದ್ದಾರೆ ಎಂದು ಅಧಿಕಾರಿಗಳು ಬಹಿರಂಗಪಡಿಸಿದ್ದಾರೆ.. ಮಕ್ಕಳನ್ನು ಅಧಿಕಾರಿಗಳು ಪ್ರಶ್ನಿಸುವ ವೇಳೆ ಮಕ್ಕಳ ಪೋಷಕರು ಉಪಸ್ಥಿತರಿದ್ದರು. "ಅಂಕಗಳನ್ನು ಜೋಡಿಸುವಾಗ ಮಕ್ಕಳ ಸಬ್ಜೆಕ್ಟಿವ್ ಮತ್ತು ಅಬ್ಜೆಕ್ಟಿವ್ ನಂಬರ್‌ಗಳಲ್ಲಿ ಅಂತರವಿತ್ತು. ವಿಶೇಷವಾಗಿ ಗಣಿತದಲ್ಲಿ ಭಾರೀ ಅಂತರ ಇದ್ದುದು ಪೇಪರ್ ತಿದ್ದುವವರ ಗಮನಕ್ಕೆ ಬಂದಿತ್ತು. ಆಗ ನಮಗೆ ಏನೆಂದೇ ಅರ್ಥವಾಗಲಿಲ್ಲ. ನಾವು ಕೆಲವು ಶಂಕಿತ ಪರೀಕ್ಷಾ ಕೇಂದ್ರಗಳ ಸಿಸಿಟಿವಿ ಫುಟೇಜ್‌ನ್ನು ಪರೀಕ್ಷಿಸಿರಲಿಲ್ಲ" ಎಂದು ವಿಶೇಷ ಕರ್ತವ್ಯಾಧಿಕಾರಿ ಎಂ.ಎ. ಪಠಾಣ್ ಹೇಳಿದ್ದಾರೆ. ಪರೀಕ್ಷೆಯಲ್ಲಿ ಅಕ್ರಮವೆಸಗಿದ ಐನೂರು ವಿದ್ಯಾರ್ಥಿಗಳನ್ನು ಪ್ರಶ್ನಿಸಲು ಕರೆಯಿಸಿಕೊಳ್ಳಲಾಗಿದ್ದು ಇವರ ಪರೀಕ್ಷಾ ಫಲಿತಾಂಶಗಳನ್ನು ತಡೆಹಿಡಿಯಲಾಗಿದೆ. ಇವರು ಲಂಬಾಡಿಯಾ(ಸಬರ್‌ಕಾಂತಾ),ಚೋಯಿಲಾ(ಅರಾವಲಿ) ಮತ್ತು ಭಿಕಾಪುರ(ಚೋಟಾ ಉದಯಪುರ)ದಲ್ಲಿನ ಮೂರು ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆಯನ್ನು ಬರೆದಿದ್ದರು.

       ಸರಕಾರಿ ಅನುದಾನ ಇರುವ ಮಾಧ್ಯಮಿಕ ಶಾಲೆಯ ವಿದ್ಯಾರ್ಥಿಗಳು ಇವರಾಗಿದ್ದು ಕಳೆದ ವರ್ಷಕ್ಕೆ ಹೋಲಿಸಿದರೆ ಈ ಸಲ ಈ ಶಾಲೆಗಳು ಉತ್ತಮ ಫಲಿತಾಂಶ ದಾಖಲಿಸಿತ್ತು. ಈ ಕಾರಣದಿಂದ ಈ ಶಾಲೆಗಳಿಗೆ ಸರಕಾರದಿಂದ ಹೆಚ್ಚಿನ ಅನುದಾನ ಸಿಗಲಿಕ್ಕೆ ಆರಂಭವಾಗಿತ್ತು. ವಿಚಾರಣೆ ನಂತರವೂ ಮಕ್ಕಳ ಪೋಷಕರು ತಮ್ಮ ಮಕ್ಕಳು ಯಾವುದೇ ತಪ್ಪೆಸಗಿಲ್ಲ ಅವರಲ್ಲಿ ಕೇಳಿದ ಪ್ರಶ್ನೆಗಳೆಲ್ಲ ಅವರಿಗೆ ಇಷ್ಟು ದಿನಗಳವರೆಗೆ ನೆನಪು ಉಳಿದಿಲ್ಲ ಮರೆತುಹೋಗಿದೆ ಎಂದು ಮಕ್ಕಳ ಪೋಷಕರು ಹೇಳಿದ್ದಾರೆ. ಈ ನಡುವೆ ಪರೀಕ್ಷಾ ಮಂಡಳಿಯ ಹಿರಿಯ ಅಧಿಕಾರಿಯೊಬ್ಬರು "ನಾವು ಹೆಚ್ಚೆಂದರೆ ಪರೀಕ್ಷಾ ಕೇಂದ್ರಗಳನ್ನು ವಜಾಗೊಳಿಸಬಹುದು, ತಪ್ಪಿತಸ್ಥ ಅಧ್ಯಾಪಕರ ವಿರುದ್ಧ ಕ್ರಮಕೈಗೊಳ್ಳಲು ನಮಗೆ ಅಧಿಕಾರವಿಲ್ಲ ಎಂದು ಹೇಳಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News