ಆರ್‌ಬಿಐ ಗವರ್ನರ್‌ಗೆ 3 ವರ್ಷಗಳ ಅವಧಿ ತೀರಾ ಕಡಿಮೆ: ರಾಜನ್

Update: 2016-06-30 18:35 GMT

ಹೊಸದಿಲ್ಲಿ, ಜೂ.30: ಭಾರತೀಯ ರಿಸರ್ವ್ ಬ್ಯಾಂಕ್ ಗವರ್ನರ್ ಹುದ್ದೆಯ ಅಧಿಕಾರಾವಧಿಯನ್ನು ವಿಸ್ತರಿಸಬೇಕೆಂದು ಗುರುವಾರ ಆರ್‌ಬಿಐ ಅಧ್ಯಕ್ಷ ರಘುರಾಮ್ ರಾಜನ್ ಅಭಿಪ್ರಾಯಿಸಿದ್ದಾರೆ. ಕೇಂದ್ರೀಯ ಬ್ಯಾಂಕ್‌ಗಳ ಅಧ್ಯಕ್ಷರ ಅಧಿಕಾರಾವಧಿಗೆ ಸಂಬಂಧಿಸಿ ಜಗತ್ತಿನ ವಿವಿಧ ರಾಷ್ಟ್ರಗಳಲ್ಲಿ ಅನುಸರಿಸಲಾಗುತ್ತಿರುವ ಪದ್ಧತಿಯನ್ನು ಭಾರತದಲ್ಲಿಯೂ ಅನುಸರಿಸಬೇಕೆಂದು ಅವರು ಪ್ರತಿಪಾದಿಸಿದ್ದಾರೆ. ಆರ್‌ಬಿಐ ಅಧ್ಯಕ್ಷರಾಗಿ ರಘುರಾಮ್ ರಾಜನ್ ಅವರ ಮೂರು ವರ್ಷಗಳ ಅಧಿಕಾರಾವಧಿಯು ಮುಂದಿನ 9 ವಾರಗಳಲ್ಲಿ ಕೊನೆಗೊಳ್ಳಲಿದೆ.

  
   
 ಅರ್ಥಿಕತೆ ಹಾಗೂ ಬ್ಯಾಂಕ್‌ಗಳ ಅನುತ್ಪಾದಕ ಆಸ್ತಿಗಳ ಕುರಿತ ಸಂಸದೀಯ ಸ್ಥಾಯಿ ಸಮಿತಿಯ ಜೊತೆ ಮಾತುಕತೆ ನಡೆಸಿದ ಸಂದರ್ಭದಲ್ಲಿ ರಾಜನ್ ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಆರ್‌ಬಿಐ ಗವರ್ನರ್ ಅಧಿಕಾರಾವಧಿ ಎಷ್ಟಿರಬೇಕೆಂಬ ಬಗ್ಗೆ ಸಮಿತಿಯ ಸದಸ್ಯರು ರಾಜನ್ ಅವರ ಸಲಹೆ ಕೇಳಿದ್ದರು. ಆರ್‌ಬಿಐ ಅಧ್ಯಕ್ಷರ ಮೂರು ವರ್ಷಗಳ ಅಧಿಕಾರಾವಧಿಯು ತೀರಾ ಕಡಿಮೆಯಾಯಿತೆಂದು ಅವರು ಅಭಿಪ್ರಾಯಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News