ರೈತರಿಗೆ ಸಾಲ ನೀಡಲು ನಿರಾಕರಣೆ: ಮಹಾರಾಷ್ಟ್ರದಲ್ಲಿ 32 ಲಕ್ಷ ರೈತರು ಸಂಕಷ್ಟದಲ್ಲಿ!

Update: 2016-07-01 04:58 GMT

 ಮುಂಬೈ,ಜುಲೈ 1: ಸಹಕಾರಿ ಬ್ಯಾಂಕ್‌ಗಳು ರೈತರಿಗೆ ಸಾಲ ನಿರಕಾರಿಸಿದ ಹಿನ್ನೆಲೆಯಲ್ಲಿ ಮಹಾರಾಷ್ಟ್ರದ ಸುಮಾರು 32 ಲಕ್ಷ ರೈತರು ಸಂಕಷ್ಟದಲ್ಲಿ ಸಿಲುಕಿದ್ದಾರೆ. ಸಾಲವನ್ನು ಮರು ಪಾವತಿಸದಿರುವವರಿಗೆ ಸಾಲ ನೀಡಲು ಸಹಕಾರಿ ಬ್ಯಾಂಕ್‌ಗಳು ಹಿಂದೆಸರಿದಿದ್ದು ಸಾಲವಿತರಣೆ ನಿಯಮದಲ್ಲಿ ಮಹಾರಾಷ್ಟ್ರ ಸರಕಾರ ಬದಲಾವಣೆ ತಂದು ಸಾಲ ನೀಡಲು ಸೂಚಿಸಿದ್ದರೂ ಅದನ್ನು ಪಾಲಿಸಲು ತಮ್ಮಿಂದ ಸಾಧ್ಯವಿಲ್ಲ ಎಂದು ಸಹಕಾರಿ ಬ್ಯಾಂಕ್‌ಗಳು ಸರಕಾರಕ್ಕೆ ತಿಳಿಸಿವೆ.

   ಸಾಲ ಮರುಪಾವತಿಸುವ ಕಾಲಾವಧಿ ಮೂರರಿಂದ ಐದುವರ್ಷಕ್ಕೆ ವಿಸ್ತರಿಸಬೇಕೆಂದೂ ಮೊದಲನೆ ವರ್ಷದ ಬಡ್ಡಿಯನ್ನುಮನ್ನಾ ಮಾಡಬೇಕೆಂದು ಮಹಾರಾಷ್ಟ್ರ ಸರಕಾರ ರಾಜ್ಯದ ಸಹಕಾರಿ ಬ್ಯಾಂಕ್‌ಗಳಿಗೆ ಸೂಚಿಸಿತ್ತು. ಆದರೆ ರಿಸರ್ವ್‌ಬ್ಯಾಂಕ್ ಆದೇಶವಿಲ್ಲದೆ ಸಾಲ ವಿತರಣಾ ವ್ಯವಸ್ಥೆಯಲ್ಲಿ ಬದಲಾವಣೆ ಮಾಡಲು ತಮ್ಮಿಂದ ಸಾಧ್ಯವಿಲ್ಲ ಎಂದು ಬ್ಯಾಂಕ್‌ಗಳು ಹೇಳುತ್ತಿವೆ. 2010-11 ಆರ್ಥಿಕ ವರ್ಷದಿಂದ ಈವರೆಗೆ 32 ಲಕ್ಷ ರೈತರಿಗೆ ಸಾಲ ನೀಡಲಾದ 12,000 ಕೋಟಿ ರೂಪಾಯಿಯನ್ನು ರೈತರು ಮರುಪಾವತಿಸಿಲ್ಲ. ಸರಕಾರ ಕೃಷಿ ಸಾಲ ಯೋಜನೆಯಲ್ಲಿ ರೈತ ಸಾಲದ ಮೊತ್ತವನ್ನು 42,000 ಕೋಟಿರೂಪಾಯಿಯಿಂದ 54,000 ಕೋಟಿ ರೂಪಾಯಿಗೆ ಏರಿಸಿದ್ದರೂ ಬ್ಯಾಂಕ್‌ಗಳ ನಿಲುವು ರೈತರಿಗೆ ಪ್ರತಿಕೂಲಕರವಾಗಿದೆ. ಬ್ಯಾಂಕ್ ಹಣ ನೀಡದಿದ್ದರೆ ರೈತರು ಅನಿವಾರ್ಯವಾಗಿ ಬಡ್ಡಿ ಚಕ್ರಬಡ್ಡಿ ಲೇವಾದೇವಿದಾರರನ್ನು ಆಶ್ರಯಿಸುಬೇಕಾಗುತ್ತದೆ. ಸರಕಾರದ ಲೆಕ್ಕದಲ್ಲಿ ಮಹಾರಾಷ್ಟ್ರ ರಾಜ್ಯದಲ್ಲಿ 1.3ಕೋಟಿ ರೈತರಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News