ದೇಶೀ ನಿರ್ಮಿತ ಯುದ್ಧ ವಿಮಾನ "ತೇಜಸ್" ಭಾರತೀಯ ಸೇನೆಗೆ ಸೇರ್ಪಡೆ

Update: 2016-07-01 05:13 GMT

ಹೊಸದಿಲ್ಲಿ, ಜು.1:ಸ್ವದೇಶಿ ನಿರ್ಮಿತ ಯುದ್ಧ ವಿಮಾನವನ್ನು ಬಳಕೆ ಮಾಡಬೇಕೆಂಬ ಭಾರತೀಯ ವಾಯು ಸೇನೆಯ ದಶಕಗಳ ಕನಸು ಇಂದು  ನನಸಾಗಿದ್ದು, ಸ್ವದೇಶಿ ನಿರ್ಮಿತ  ತೇಜಸ್ ಯುದ್ಧ ವಿಮಾನ ಅಧಿಕೃತವಾಗಿ ಸೇನೆಗೆ ಸೇರ್ಪಡೆಗೊಂಡಿದೆ.
ಬೆಂಗಳೂರಿನ ಹೆಚ್ ಎಎಲ್ ವಿಮಾನ ನಿಲ್ದಾಣದಲ್ಲಿ ಹಿಂದೂಸ್ತಾನ್ ಏರೋನಾಟಿಕಲ್ಸ್ ಸಂಸ್ಥೆ ನಿರ್ಮಾಣ ಮಾಡಿರುವ ತೇಜಸ್ ಯುದ್ಧ ವಿಮಾನಗಳು ಭಾರತೀಯ ಸೇನೆಗೆ  ಇಂದು ಅಧಿಕೃತವಾಗಿ ಸೇರ್ಪಡೆಗೊಂಡಿತು. ಯುದ್ಧ ವಿಮಾನ  ಸೇರ್ಪಡೆಗೆ  ಮುನ್ನ ಪೂಜೆ,ಸರ್ವಧರ್ಮ ಪ್ರಾರ್ಥನೆ  ನಡೆಯಿತು.  
  1970ರಲ್ಲೇ ಭಾರತ ಸ್ವದೇಶಿ ಯುದ್ಧ  ವಿಮಾನ ನಿಮಿ೯ಸಬೇಕೆ೦ಬ ಆಲೋಚನೆ ಮಾಡಿದ್ದರೂ, ಇದಕ್ಕೆ ಸ್ಪಷ್ಟ ರೂಪ ಸಿಕ್ಕಿದ್ದು 1980 ದಶಕದಲ್ಲಿ.ಬಳಿಕ ಕಾರಣಾ೦ತರಗಳಿ೦ದ ವಿಮಾನ ನಿಮಾ೯ಣ ವಿಳ೦ಬಗೊ೦ಡಿತ್ತು. ಇದೀಗ ಸೇನೆಯಲ್ಲಿ  ಬಳಕೆಯಲ್ಲಿರುವ ಮಿಗ್‍-25ರ ಬದಲಾಗಿ ತೇಜಸ್ ಸೇಪ೯ಡೆಗೆ ಕೇಂದ್ರ ಸರಕಾರ  ಹಸಿರು ನಿಶಾನೆ ನೀಡಿದೆ. 2016-17ರಲ್ಲಿ  ಎಚ್‍ಎಎಲ್ ಸಂಸ್ಥೆ ಒಟ್ಟು 4 ತೇಜಸ್ ವಿಮಾನಗಳನ್ನು  ಹಸ್ತಾ೦ತರಿಸಲಿದೆ ಎಂದು ತಿಳಿದುಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News