ಮದುವೆಗೆ ಮೊದಲು ಹುಡುಗನ ಜಾತಿ, ಧರ್ಮವನ್ನು ಖಚಿತಪಡಿಸಿಕೊಳ್ಳಲು ಯುವತಿಯರಿಗೆ ಕರೆ ನೀಡಿದ ಹಿಂದೂ ಜಾಗರಣ್ ಮಂಚ್

Update: 2016-07-03 09:35 GMT

ಆಗ್ರಾ,ಜುಲೈ 3: ಮದುವೆ ಮಾಡಿಕೊಳ್ಳುವ ಮೊದಲುಹುಡುಗಿಯರು ತಮ್ಮ ಸಂಗಾತಿಗಳ ಗುರುತು ಚೀಟಿಯನ್ನು ಪರೀಕ್ಷಿಸಿಕೊಳ್ಳಬೇಕು.ಆಮೂಲಕ ವರನದ್ದು ಯಾವ ಜಾತಿಯೆಂದು ಖಚಿತಗೊಳಿಸಬೇಕೆಂದು ಕೇಸರಿ ಸಂಘಟನೆಯಾದ ಹಿಂದೂ ಜಾಗರಣ್ ಮಂಚ್ ಹೇಳಿದೆ. ಲವ್‌ಜಿಹಾದ್ ವಿರುದ್ಧ ಉತ್ತರಪ್ರದೇಶದಲ್ಲಿಸಂಘಟನೆ ಆರಂಭಿಸಿರುವ ಸೇವ್ ಹಿಂದೂ ಗರ್ಲ್ಸ್ ಅಭಿಯಾನದ ಅಂಗವಾಗಿ ಹೊರಡಿಸಲಾದ ಕರಪತ್ರದಲ್ಲಿ ಈ ವಿಷಯವನ್ನು ವಿವರಿಸಲಾಗಿದೆ. ಆರೆಸ್ಸೆಸ್ ಪರಿವಾರಿ ಸಂಘಟನೆಯಾದ ಜಾಗರಣ್ ಮಂಚ್ ಆರೆಸ್ಸೆಸ್‌ನ ಅಧೀನದ ಶಾಲೆಗಳಲ್ಲಿ ಅಭಿಯಾನ ನಡೆಸುವ ಉದ್ದೇಶವನ್ನಿಟ್ಟುಕೊಂಡಿದೆ. ಈ ತಿಂಗಳು ಹದಿನೈದು ತಾರೀಕಿನಿಂದ ಅಭಿಯಾನ ಆರಂಭವಾಗಲಿದೆ.

  ನಿಮಗೆ ಅನುಯೋಜ್ಯ ಹುಡುಗನನ್ನು ಆಯ್ಕೆ ಮಾಡಿದ ಬಳಿಕ ಆತನ ಗುರುತು ಚೀಟಿ ಆಧಾರ್‌ಕಾರ್ಡ್‌ನನ್ನು ಪರೀಕ್ಷಿಸಿ ವಿವಾಹವಾಗಿರಿ ಎಂದು ಕರಪತ್ರದಲ್ಲಿದೆ. ಮದುವೆಯಾಗಲು ಬಯಸಿದಾತನನ್ನು ಒಂದು ದೇವಸ್ಥಾನಕ್ಕೆಕರೆದೊಯ್ದು ಆತ ಪ್ರಸಾದ ಸ್ವೀಕರಿಸುತ್ತಿದ್ದಾನೆಯೇ ಎಂದು ಗೊತ್ತುಪಡಿಸಿಕೊಳ್ಳಬೇಕು. ಭಾರತವನ್ನು ಒಂದು ಇಸ್ಲಾಮೀ ರಾಷ್ಟ್ರ ಮಾಡಲು ಲವ್‌ಜಿಹಾದ್‌ಮೂಲಕ ಪ್ರಯತ್ನಿಸಲಾಗುತ್ತಿದೆ ಎಂದು ಕರಪತ್ರ ವಿವರಿಸುತ್ತಿದೆ.

ಅದೇ ವೇಳೆ ಹಿಂದೂ ಜಾಗರಣ್ ಮಂಚ್ ಪರಿವಾರದ ಸಂಘಟನೆಯಾದರೂ ಸ್ವತಂತ್ರವಾಗಿ ಕಾರ್ಯವೆಸಗುತ್ತಿದೆ ಎಂದು ಆರೆಸ್ಸೆಸ್ ವಕ್ತಾರ ಕೇಶವ್‌ಜಿ ಹೇಳಿದ್ದಾರೆ. ಇಂತಹ ವಿಷಯಗಳಲ್ಲಿ ಅದು ಆರೆಸ್ಸೆಸ್‌ನ ಅನುಮತಿಯನ್ನು ಯಾಚಿಸುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News