‘ನಬಾನ್ನ’ಕ್ಕೆ ಹುಸಿ ಬಾಂಬ್ ಬೆದರಿಕೆ, ಓರ್ವನ ಸೆರೆ

Update: 2016-07-04 18:49 GMT

ಕೋಲ್ಕತಾ,ಜೂ.4: ರಾಜ್ಯ ಸಚಿವಾಲಯವನ್ನು ಹೊಂದಿರುವ ಹೌರಾದ ‘ನಬಾನ್ನ’ ಕಟ್ಟಡದಲ್ಲಿ ಬಾಂಬ್ ಇರಿಸಲಾಗಿದೆ ಎಂಬ ಅನಾಮಿಕ ಫೋನ್ ಕರೆ ರವಿವಾರ ರಾತ್ರಿ ಪೊಲೀಸ್ ಅಧಿಕಾರಿಗಳನ್ನು ಕಂಗೆಡಿಸಿತ್ತು. ಆದರೆ ಇದೊಂದು ಹುಸಿ ಬೆದರಿಕೆ ಎನ್ನುವುದು ಬಳಿಕ ಬೆಳಕಿಗೆ ಬಂದಿದ್ದು, ಈ ಸಂಬಂಧ ಓರ್ವನನ್ನು ಬಂಧಿಸಲಾಗಿದೆ. ಅನಿರುದ್ಧ್ ಘೋಷ್ ಬಂಧಿತ ಆರೋಪಿ ಯಾಗಿದ್ದಾನೆ. ಈತನನ್ನು ತಡ ರಾತ್ರಿಯೇ ಕಾಳಿ ಘಾಟ್ ರಸ್ತೆಯ ನಿವಾಸ ದಿಂದ ಬಂಧಿಸಲಾಗಿದೆ.ರಾತ್ರಿ ಒಂಬತ್ತು ಗಂಟೆಯ ಸುಮಾರಿಗೆ ಕೋಲ್ಕತಾ ಪೊಲೀಸ್ ನಿಯಂತ್ರಣ ಕೊಠಡಿಗೆ ಬಾಂಬ್ ಬೆದರಿಕೆ ಕರೆ ಬಂದಿತ್ತು. ತಕ್ಷಣವೇ ಕೋಲ್ಕತಾ ಪೊಲೀಸ್ ಆಯುಕ್ತ ರಾಜೀವ್ ಕುಮಾರ್ ಮತ್ತು ಹೌರಾ ಪೊಲೀಸ್ ವರಿಷ್ಠಾಧಿ ಕಾರಿ ದೇವೇಂದ್ರ ಪ್ರಕಾಶ್ ಸಿಂಗ್ ಅವರು ಬಾಂಬ್ ನಿಷ್ಕ್ರಿಯ ದಳ ಮತ್ತು ಶ್ವಾನದಳ ದೊಂದಿಗೆ ನಬಾನ್ನಾಕ್ಕೆ ಧಾವಿಸಿದ್ದರು. ಶೋಧ ಕಾರ್ಯಾಚರಣೆ ನಡೆಸಲಾಗಿದ್ದು, ಯಾವುದೇ ಸ್ಫೋಟಕ ಪತ್ತೆಯಾಗಿಲ್ಲ. ಘೋಷ್‌ನನ್ನು ವಿಚಾರಣೆಗೊಳಪಡಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೋರ್ವರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News