ಉಗ್ರಗಾಮಿ ಸಂಘಟನೆಯ ‘ಚೀಫ್ ಕಮಾಂಡರ್’ಹತ್ಯೆ

Update: 2016-07-05 13:12 GMT

ಇಂಫಾಲ,ಜು.5: ಮಣಿಪುರದ ಚುರಾಚಂದಪುರ ಜಿಲ್ಲೆಯಲ್ಲಿ ಉಗ್ರಗಾಮಿ ಸಂಘಟನೆಯೊಂದರ ಸ್ವಘೋಷಿತ ಕಮಾಂಡರ್‌ನನ್ನು ದುಷ್ಕರ್ಮಿಗಳು ಮಂಗಳವಾರ ಹತ್ಯೆ ಮಾಡಿದ್ದಾರೆ.

 ಚುರಾಚಂದಪುರ ಜಿಲ್ಲಾ ಕೇಂದ್ರ ಲಮ್ಕಾ ನಿವಾಸಿ ಲಾಲ್ತಂಗ್‌ಸಂಗ್ (55) ಹಮರ್ ನ್ಯಾಷನಲ್ ಆರ್ಮಿ(ಎಚ್‌ಎನ್‌ಎ)ಯ ನಾಯಕನಾಗಿದ್ದ. ನಸುಕಿನ ಒಂದು ಗಂಟೆಗೆ ಆತನ ನಿವಾಸದಲ್ಲಿಯೇ ಈ ಹತ್ಯೆ ನಡೆದಿದೆ ಎಂದು ಪೊಲೀಸರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News