ಐಸಿಸ್ ಸಂಪೂರ್ಣ ಇಸ್ಲಾಮೇತರ: ಮೌಲಾನಾ ಮಹಲಿ

Update: 2016-07-07 12:09 GMT

ಲಕ್ನೋ, ಜು.7: ಬಾಂಗ್ಲಾದೇಶದಲ್ಲಿ ವಾರದೊಳಗೆ 2 ಭಯೋತ್ಪಾದಕ ದಾಳಿಗಳು ನಡೆದ ಬಳಿಕ, ಭಾರತದ ಹಿರಿಯ ಮುಸ್ಲಿಂ ವಿದ್ವಾಂಸರೊಬ್ಬರು ಭಯೋತ್ಪಾದನೆಯನ್ನು ಖಂಡಿಸಿದ್ದು, ಐಎಸ್‌ಐಎಸ್ಸನ್ನು (ಐಸಿಸ್) ‘ಅನಿಸ್ಲಾಮಿಕ್’ ಎಂದು ಕರೆದಿದ್ದಾರೆ.

ಗುರುವಾರ ನಡೆದ ಈದ್ ಸಾಮೂಹಿಕ ಪ್ರಾರ್ಥನೆಯ ವೇಳೆ ವಿದ್ವಾಂಸರ ಗುಂಪೊಂದು ಐಸಿಸ್ ಹಾಗೂ ಭಯೋತ್ಪಾದನೆಯ ವಿರುದ್ಧ ಪ್ರಬಲ ಸಂದೇಶವೊಂದನ್ನು ಕಳುಹಿಸಿದೆಯೆಂದು ಲಕ್ನೊದ ಅತಿದೊಡ್ಡ ಪ್ರಾರ್ಥನಾ ಮೈದಾನ ಈದ್ಗಾದ ಇಮಾಂ ಮೌಲಾನಾ ಖಾಲಿದ್ ರಶೀದ್ ಫರಂಗಿ ಮಹಲಿ ತಿಳಿಸಿದ್ದಾರೆ.

ಐಸಿಸ್ ಇಸ್ಲಾಂಗೆ ವಿರುದ್ಧವಾಗಿದೆ ಹಾಗೂ ಮಾನವತೆಗೆ ವಿರುದ್ಧವಾಗಿದೆಯೆಂದು ತಾವು ಹೇಳಿದ್ದೇವೆ. ಐಸಿಸ್ ಮುಸ್ಲಿಂ ಆಗಿರಲು ಸಾಧ್ಯವಿಲ್ಲ. ಅವರ ಭಯೋತ್ಪಾದನಾ ಚಟುವಟಿಕೆ ಸಂಪೂರ್ಣವಾಗಿ ಅನ್-ಇಸ್ಲಾಮಿಕ್ ಎಂದು ತಾವು ಘೋಷಿಸಿದ್ದೇವೆಂದು ಅವರು ಹೇಳಿದ್ದಾರೆ.

ಭಯೋತ್ಪಾದನಾ ಗುಂಪಿನ ಸಿದ್ಧಾಂತವು ಚಲಾವಣೆಯಿಲ್ಲದುದಾಗಿದೆಯೆಂದು ಮೌಲಾನಾ ಮಹಲಿ ತಿಳಿಸಿದ್ದಾರೆ.

ಲಕ್ಷಾಂತರ ಜನರು ಇಂದಿಲ್ಲಿ ಪ್ರಾರ್ಥನೆ ಸಲ್ಲಿಸಿದ್ದಾರೆ. ತಾವು ಶಾಂತಿಗಾಗಿ ಹಾಗೂ ವಿಶ್ವದಲ್ಲಿ ಭಯೋತ್ಪಾದನೆಯ ಅಂತ್ಯಕ್ಕಾಗಿ ಪ್ರಾರ್ಥಿಸಿದ್ದೇವೆಂದು ಮೌಲಾನಾ ಮಹಲಿ ಎನ್‌ಡಿಟಿವಿಗೆ ತಿಳಿಸಿದ್ದಾರೆ.

ಶಾಂತಿಯ ತನ್ನ ಸಂದೇಶವನ್ನು ಒತ್ತಿ ಹೇಳಿದ ಅವರು, ಅನೇಕ ಮಂದಿ ಮುಸ್ಲಿಮೇತರರೂ ಈದ್ ಪ್ರಾರ್ಥನೆಗಳಲ್ಲಿ ಭಾಗವಹಿಸಿ, ಮುಸ್ಲಿಮರಿಗೆ ಶುಭಾಶಯ ಕೋರಿದ್ದಾರೆಂದು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News