ತನ್ನ ಆದೇಶ ಪಾಲಿಸದ ಮಹಾರಾಷ್ಟ್ರವನ್ನು ಝಾಡಿಸಿದ ಉಚ್ಚ ನ್ಯಾಯಾಲಯ

Update: 2016-07-08 13:10 GMT

ಮುಂಬೈ,ಜು.8: ರಾಜ್ಯದಲ್ಲಿಯ ಬಳಕೆದಾರರ ವೇದಿಕೆಗಳ ನ್ಯಾಯಾಂಗ ಸದಸ್ಯರ ವೇತನ ಮತ್ತು ಭತ್ಯೆಗಳನ್ನು ಹೆಚ್ಚಿಸುವಂತೆ ತನ್ನ 2014ರ ಆದೇಶವನ್ನು ಜಾರಿಗೊಳಿಸದ್ದಕ್ಕಾಗಿ ಬಾಂಬೆ ಉಚ್ಚ ನ್ಯಾಯಾಲಯವು ಶುಕ್ರವಾರ ಮಹಾರಾಷ್ಟ್ರ ಸರಕಾರವನ್ನು ತೀವ್ರ ತರಾಟೆಗೆತ್ತಿಕೊಂಡಿತು.

ವೇತನವನ್ನು ಹೆಚ್ಚಿಸದಿರುವ ತನ್ನ ನಿರ್ಧಾರವನ್ನು ರಾಜ್ಯ ಸರಕಾರವು ಪುನರ್‌ಪರಿಶೀಲಿಸುತ್ತದೆ ಎಂದು ಸರಕಾರಿ ವಕೀಲ ಅಭಿನಂದನ್ ವಾಗ್ಯಾನಿ ಅವರು ಭರವಸೆ ನೀಡಿದ ನಂತರ ಪೀಠವು,ತಾನು ಈ ಹಂತದಲ್ಲಿ ನ್ಯಾಯಾಂಗ ಉಲ್ಲಂಘನೆ ಕ್ರಮಕ್ಕೆ ಒತ್ತಾಯಿಸುವುದಿಲ್ಲ ಎಂದು ಹೇಳಿತು.

ಮುಂಬೈ ಗ್ರಾಹಕ ಪಂಚಾಯತ್ ಮತ್ತು ಇತರರು ಸಲ್ಲಿಸಿರುವ ಅರ್ಜಿಗಳ ವಿಚಾರಣೆಯನ್ನು ನಡೆಸುತ್ತಿದ್ದ ನ್ಯಾ.ಅಭಯ ಓಕಾ ಅವರ ನೇತೃತ್ವದ ಪೀಠವು, ಉಚ್ಚ ನ್ಯಾಯಾಲಯದ ಆದೇಶವನ್ನು ಜಾರಿಗೊಳಿಸಲು ಯಾವುದೇ ಕ್ರಮವನ್ನು ಕೈಗೊಳ್ಳಲಾಗಿಲ್ಲ ಎಂದು ಬೆಟ್ಟು ಮಾಡಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News