ರಕ್ಷಣಾ ಮಹಾಲೇಖಪಾಲರಾಗಿ ಎಸ್.ಕೆ.ಕೊಹ್ಲಿ ನೇಮಕ

Update: 2016-07-08 18:03 GMT

ಹೊಸದಿಲ್ಲಿ,ಜು.8: ಹಿರಿಯ ಅಧಿಕಾರಿ ಎಸ್.ಕೆ.ಕೊಹ್ಲಿ ಅವರನ್ನು ರಕ್ಷಣಾ ಮಹಾಲೇಖಪಾಲ(ಸಿಜಿಡಿಎ)ರನ್ನಾಗಿ ಶುಕ್ರವಾರ ನೇಮಕಗೊಳಿಸಲಾಗಿದೆ.

ಸಿಜಿಡಿಎ ಹುದ್ದೆಗ ಕೊಹ್ಲಿಯವರ ಭಡ್ತಿಗೆ ಸಂಪುಟದ ನೇಮಕಾತಿ ಸಮಿತಿಯು ಒಪ್ಪಿಗೆ ನೀಡಿದೆ ಎಂದು ಸಿಬ್ಬಂದಿ ಮತ್ತು ತರಬೇತಿ ಇಲಾಖೆಯು ತನ್ನ ಆದೇಶದಲ್ಲಿ ತಿಳಿಸಿದೆ.
ಕೊಹ್ಲಿ ಭಾರತೀಯ ರಕ್ಷಣಾ ಲೆಕ್ಕಪತ್ರ ಸೇವೆ(ಐಡಿಎಎಸ್) ಅಧಿಕಾರಿಯಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News