ಹುಸಿ ಬಾಂಬ್ ಕರೆ: ಓರ್ವನ ಬಂಧನ

Update: 2016-07-09 18:07 GMT

ಹೊಸದಿಲ್ಲಿ,ಜು.9: ರಾಷ್ಟ್ರ ರಾಜಧಾನಿಯ ಹೃದಯಭಾಗದಲ್ಲಿರುವ ಕನಾಟ್ ಪ್ಲೇಸ್‌ನ ಓಡಿಯನ್ ಸಿನೆಮಾಗೃಹದಲ್ಲಿ ಬಾಂಬ್ ಇರಿಸಲಾಗಿದೆ ಎಂಬ ಅನಾಮಿಕ ದೂರವಾಣಿ ಕರೆ ಇಂದು ದಿಲ್ಲಿ ಪೊಲೀಸರನ್ನು ತುದಿಗಾಲಿನಲ್ಲಿ ನಿಲ್ಲಿಸಿತ್ತು. ವ್ಯಾಪಕ ಶೋಧದ ಬಳಿಕ ಇದೊಂದು ಹುಸಿಕರೆ ಎನ್ನುವುದು ದೃಢಪಟ್ಟಿದ್ದು ಪೊಲೀಸರು ನಿಟ್ಟುಸಿರು ಬಿಡುವಂತಾಯಿತು. ಶಂಕಿತ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ ಎನ್ನಲಾಗಿದೆ.

ಮಧ್ಯಾಹ್ನ 1:15ಕ್ಕೆ ಇತ್ತೀಚಿಗೆ ಬಿಡುಗಡೆಗೊಂಡ ಚಿತ್ರವೊಂದು ಪ್ರದರ್ಶನಗೊಳ್ಳುತ್ತಿದ್ದಾಗ ಪೊಲೀಸ್ ನಿಯಂತ್ರಣ ಕೊಠಡಿಗೆ ದೂರವಾಣಿ ಕರೆಯೊಂದು ಬಂದಿದ್ದು, ಮಾತನಾಡಿದ ವ್ಯಕ್ತಿ ತಾನು ಥಿಯೇಟರ್‌ನಲ್ಲಿ ಬಾಂಬ್ ಇಟ್ಟಿರುವುದಾಗಿ ತಿಳಿಸಿದ್ದ.

ಪೊಲೀಸರು ತಕ್ಷಣ ಬಾಂಬ್ ನಿಷ್ಕ್ರಿಯ ದಳದೊಂದಿಗೆ ಸ್ಥಳಕ್ಕೆ ಧಾವಿಸಿ ಜನರನ್ನು ತೆರವುಗೊಳಿಸಿ ತಪಾಸಣೆ ನಡೆಸಿದ್ದು,ಯಾವುದೇ ಬಾಂಬ್ ಪತ್ತೆಯಾಗಿಲ್ಲ. ದಿಲ್ಲಿಯ ಪಹರ್‌ಗಂಜ್ ನಿವಾಸಿಯೆನ್ನಲಾಗಿರುವ ಶಂಕಿತ ಆರೋಪಿಯನ್ನು ಪೊಲಿಸರು ವಶಕ್ಕೆ ತೆಗೆದುಕೊಂಡು ವಿಚಾರಣೆಗೊಳಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News