ಜುಲೈ 12-13: ಬ್ಯಾಂಕ್ ಮುಷ್ಕರ

Update: 2016-07-10 13:20 GMT

ಹೊಸದಿಲ್ಲಿ,ಜು.10: ಪ್ರಸ್ತಾವಿತ ಎಸ್‌ಬಿಐ ಸಹವರ್ತಿ ಬ್ಯಾಂಕುಗಳ ವಿಲೀನ ಮತ್ತು ಐಡಿಬಿಐ ಬ್ಯಾಂಕಿನ ಖಾಸಗೀಕರಣವನ್ನು ವಿರೋಧಿಸಿ ಜು.12ರಿಂದ ರಾಷ್ಟ್ರವ್ಯಾಪಿ ಮುಷ್ಕರವನ್ನು ನಡೆಸುವುದಾಗಿ ಒಂದು ವರ್ಗದ ಸರಕಾರಿ ಸ್ವಾಮ್ಯದ ಬ್ಯಾಂಕುಗಳ ನೌಕರರು ಬೆದರಿಕೆಯೊಡ್ಡಿದ್ದು, ಈ ವಾರ ಎರಡು ದಿನಗಳ ಕಾಲ ಬ್ಯಾಂಕುಗಳ ಕಾರ್ಯಾಚರಣೆಯಲ್ಲಿ ವ್ಯತ್ಯಯವಾಗಬಹುದು.

ಮುಖ್ಯ ಕಾರ್ಮಿಕ ಆಯುಕ್ತರೊಂದಿಗಿನ ಸಂಧಾನ ಮಾತುಕತೆಯು ವಿಫಲಗೊಂಡಿದ್ದು, ನಮ್ಮ ಕರೆಯಂತೆ ಮುಷ್ಕರ ನಡೆಯಲಿದೆ ಎಂದು ಅಖಿಲ ಭಾರತ ಬ್ಯಾಂಕ್ ಉದ್ಯೋಗಿಗಳ ಸಂಘದ ಪ್ರಧಾನ ಕಾರ್ಯದರ್ಶಿ ಸಿ.ಎಚ್.ವೆಂಕಟಾಚಲಂ ಅವರು ಸುದ್ದಿಸಂಸ್ಥೆಗೆ ತಿಳಿಸಿದರು.

ಎಐಬಿಒಎ ಮತ್ತು ಎಸ್‌ಎಸ್‌ಬಿಎ ಈ ಮುಷ್ಕರದಲ್ಲಿ ಪಾಲ್ಗೊಳ್ಳಲಿವೆ.

ಎಸ್‌ಬಿಐನ ಐದು ಸಹವರ್ತಿ ಬ್ಯಾಂಕುಗಳು ಜು.12ರಂದು ಮತ್ತು ಇತರ ಸಾರ್ವಜನಿಕ ಕ್ಷೇತ್ರದ ಬ್ಯಾಂಕುಗಳು ಜು.13ರಂದು ಮುಷ್ಕರವನ್ನು ನಡೆಸಲಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News