ಸರೋವರದ ಬಳಿ ಕಟ್ಟಡ ನಿರ್ಮಾಣ ವಿರೋಧಿಸಿ ಜಲ ಸತ್ಯಾಗ್ರಹ

Update: 2016-07-10 18:33 GMT

ಇಂದೋರ್, ಜು.10: ಶತಮಾನಗಳಷ್ಟು ಹಳೆಯದಾದ ಇಲ್ಲಿಯ ಪಿಪ್ಲಿಯಾಹನಾ ಸರೋವರಕ್ಕೆ ಹೊಂದಿಕೊಂಡೇ ಜಿಲ್ಲಾ ನ್ಯಾಯಾಲಯ ಸಂಕೀರ್ಣದ ನಿರ್ಮಾಣವನ್ನು ವಿರೋಧಿಸಿ ಸಾಮಾಜಿಕ ಕಾರ್ಯಕರ್ತ ಕಿಶೋರ ಕೊಡ್ವಾನಿ ನೇತೃತ್ವದಲ್ಲಿ ಸುಮಾರು 15 ಜನರು ರವಿವಾರ ‘ಜಲ ಸತ್ಯಾಗ್ರಹ ’ವನ್ನು ನಡೆಸಿದರು.

ಪ್ರತಿಭಟನಾಕಾರರು ಎಂ.ಜಿ.ರಸ್ತೆಯಲ್ಲಿರುವ ಸರೋವರದ ಮೊಳಕಾಲುದ್ದದ ನೀರಿನಲ್ಲಿ ಸುಮಾರು 2-3 ಗಂಟೆಗಳ ಕಾಲ ನಿಂತುಕೊಂಡು ಕಟ್ಟಡ ನಿರ್ಮಾಣಕ್ಕೆ ತಮ್ಮ ವಿರೋಧವನ್ನು ವ್ಯಕ್ತಪಡಿಸಿದರು. ಕಟ್ಟಡ ನಿರ್ಮಾಣವು ಸರೋವರ,ಅಂತರ್ಜಲ ಮಟ್ಟ ಮತ್ತು ಪರಿಸರದ ಮೇಲೆ ದುಷ್ಪರಿಣಾಮಗಳನ್ನು ಬೀರುತ್ತದೆ ಎಂದು ಕೊಡ್ವಾನಿ ಹೇಳಿದರು.

ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳೂ ಈ ಯೋಜನೆಯನ್ನು ವಿರೋಧಿಸುತ್ತಿವೆ. ಜೊತೆಗೆ ನಿರ್ಮಾಣವನ್ನು ವಿರೋಧಿಸುತ್ತಿರುವ ಗಣ್ಯರಲ್ಲಿ ಲೋಕಸಭಾ ಸ್ಪೀಕರ್ ಹಾಗೂ ಸ್ಥಳೀಯ ಸಂಸದೆ ಸುಮಿತ್ರಾ ಮಹಾಜನ ಅವರೂ ಸೇರಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News