ಜೈನ ಭಿಕ್ಷು ಅಂತ್ಯಕ್ರಿಯೆಗೆ 7 ಕೋಟಿ ರೂ. ಸಂಗ್ರಹ !

Update: 2016-07-11 05:12 GMT

 ಮುಂಬೈ, ಜು.11:  ಜೈನ ಭಿಕ್ಷು ಒಬ್ಬರ ಅಂತ್ಯಕ್ರಿಯೆಯನ್ನು ನೆರವೇರಿಸಲು ನಡೆಸಲಾದ ಹರಾಜು ಪ್ರಕ್ರಿಯೆಯಲ್ಲಿ   7 ಕೋಟಿ ರೂ. ಹಣ ಸಂಗ್ರಹವಾಗಿದೆ.
ಮಧ್ಯಪ್ರದೇಶದ ಧಾರ್ ಜಿಲ್ಲೆಯ ಸಣ್ಣ ನಗರ ರಾಜ್‌ಗರ‍್ ನಲ್ಲಿ ಇತ್ತೀಚೆಗೆ ಜೈನ ಭಿಕ್ಷು ಶ್ರೀ ಮಧ್ವಿಜಯ್ ರವೀಂದ್ರಸೂರಿ ಮಹಾರಾಜಸಾಹೇಬ್ ಜೀ(62) ಭಿಕ್ಷು ಸಾವನ್ನಪ್ಪಿದ್ದರು. ಇವರ ಅಂತ್ಯಕ್ರಿಯೆಯನ್ನು  ನೆರವೇರಿಸುವ ಹಕ್ಕಿಗಾಗಿ  ಹರಾಜು ಮೂಲಕ ಭಕ್ತರಿಗೆ ಅವಕಾಶ ನೀಡಲಾಗಿತ್ತು.
ಅಂತ್ಯ ಸಂಸ್ಕಾರದ ಪ್ರತಿಯೊಂದು ವಿಧಾನಗಳಿಗೂ ಹರಾಜು ಕೂಗಲಾಗಿತ್ತು. ಆದರೆ ಇದಕ್ಕೆ ಅಫೂರ್ವ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಸಂಘಟಕರ ನಿರೀಕ್ಷೆಗೂ ಮೀರಿದ ಹಣ ಸಂಗ್ರಹವಾಗಿದೆ.
ಒಟ್ಟು 25ವಿಧಾನಗಳಿಗೆ ರವಿವಾರ ಹರಾಜು ಹಾಕಲಾಗಿತ್ತು. ಅಂತ್ಯಕ್ರಿಯೆಯಲ್ಲಿ ಭಿಕ್ಷು ಪಾದ ತೊಳೆಯುವದು, ಮೃತದೇಹವನ್ನ ಸುತ್ತುವುದಕ್ಕೆ, ಕೊನೆಯ ಆರತಿ ಬೆಳಗಲು,  ಕೇಸರಿ ಮತ್ತು ಗಂಧವನ್ನ ದೇಹದ ಮೇಲೆ ಲೇಪಿಸಲು ಸೇರಿದಂತೆ ಒಟ್ಟು 25 ವಿಧಿವಿಧಾನಗಳಿಗೆ ಹರಾಜು ಕೂಗಲಾಗಿತ್ತು. ದೇಶ ವಿದೇಶದ ಅಭಿಮನಿಗಳು ಹರಾಜಿನಲ್ಲಿ ಭಾಗವಹಿಸಿರುವುದು ವಿಶೇಷ.
ಹರಾಜಿನಲ್ಲಿ ಚಿನ್ನದ ವ್ಯಾಪಾರಿಗಳು ಮೇಲುಗೈ ಸಾಧಿಸಿದ್ದರು ಎನ್ನುವುದು ಇಲ್ಲಿ ವಿಶೇಷ. ದುಬೈನ ಜಯೆಷ್ ಬಾಯ್ 68 ಲಕ್ಷ ರೂ. ನೀಡಿ ಅಂತ್ಯಕ್ರಿಯೆಯ ಮೊದಲ ಹಕ್ಕನ್ನ ಪಡೆದರು. ೨ನೆ ವ್ಯಕ್ತಿ 42 ಲಕ್ಷ ರೂ, ಮೂರನೆ ವ್ಯಕ್ತಿ 27 ಲಕ್ಷ ರೂ, ನಾಲ್ಕನೆ  ವ್ಯಕ್ತಿ 20 ಲಕ್ಷ ರೂ. ನೀಡಿದ್ದಾರೆ.  ಭಿಕ್ಷು ಮೃತದೇಹವನ್ನು  ಸುತ್ತುವ ಹಕ್ಕು ಪಡೆಯಲು  ಭಕ್ತರೊಬ್ಬರು ಒಟ್ಟು 52.52 ಲಕ್ಷ ರೂ. ನೀಡಿದ್ದಾರೆ ಎಂದು ತಿಳಿದು ಬಂದಿದೆ.
ರಾಜ್‌ಘರ‍್ನ ಮೋಹನ್ ಖೇಡಾ ದೇವಸ್ಥಾನದಲ್ಲಿ ಹರಾಜು ಪ್ರಕ್ರಿಯೆ ನಡೆಸಲಾಗಿತ್ತು. ಸಂಗ್ರಹವಾಗಿರುವ ಹಣವನ್ನು ದೇವಸ್ಥಾನದಲ್ಲಿ ಧಾರ್ಮಿಕ ಕಾರ‍್ಯಗಳಿಗೆ ವಿನಿಯೋಗಿಸಲಾಗುವುದು ಎಂದು ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News