ಘಟಿಕೋತ್ಸವದಲ್ಲಿ ಖಾದಿ ಧರಿಸಲಿರುವ ಐಐಟಿ ಮುಂಬೈ ವಿದ್ಯಾರ್ಥಿಗಳು

Update: 2016-07-11 13:55 GMT

ಮುಂಬೈ,ಜು.11: ವಿದ್ಯಾರ್ಥಿಗಳಲ್ಲಿ ರಾಷ್ಟ್ರೀಯತೆಯ ಭಾವನೆಯನ್ನು ಬೆಳೆಸುವ ಕ್ರಮವಾಗಿ ಐಐಟಿ ಮುಂಬೈ ಘಟಿಕೋತ್ಸವದಲ್ಲಿ ವಿದ್ಯಾರ್ಥಿಗಳ ಬಳಕೆಗಾಗಿ ಖಾದಿ ಹತ್ತಿಯಿಂದ ನಿರ್ಮಿತ 3,500 ಗೌನುಗಳಿಗಾಗಿ ಬೇಡಿಕೆ ಸಲ್ಲಿಸಿದೆ.
ಹೇಳಿಕೆಯೊಂದರಲ್ಲಿ ಈ ವಿಷಯವನ್ನು ತಿಳಿಸಿರುವ ಕಿರು,ಸಣ್ಣ ಮತ್ತು ಮಧ್ಯಮ ಉದ್ಯಮಗಳ ಸಚಿವಾಲಯವು, ಗುಜರಾತ್ ವಿವಿಯ ಬಳಿಕ ಖಾದಿ ಈಗ ಭಾರತದ ಪ್ರತಿಷ್ಠಿತ ಐಐಟಿ ಮುಂಬೈನ ಅಧಿಕಾರಿಗಳ ಮನವನ್ನು ಗೆದ್ದಿದೆ ಎಂದು ಹೇಳಿದೆ.
ವಿದ್ಯಾರ್ಥಿಗಳಲ್ಲಿ ರಾಷ್ಟ್ರೀಯ ಭಾವನೆಯನ್ನು ಮೈಗೂಡಿಸಲು ಸಂಸ್ಥೆಯು ಖಾದಿಗೆ ಆದ್ಯತೆ ನೀಡಿದೆ ಎಂದು ಐಐಟಿ ಮುಂಬೈ ನಿರ್ದೇಶಕ ದೇವಾಂಗ ಖಾಖರ್ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News