21 ಸಂಸದೀಯ ಕಾರ್ಯದರ್ಶಿಗಳ ನೇಮಕಕ್ಕೆ ಕಾನೂನಿನಲ್ಲಿ ಅವಕಾಶವಿಲ್ಲ

Update: 2016-07-13 18:35 GMT

ಹೊಸದಿಲ್ಲಿ,ಜು.13: ದಿಲ್ಲಿಯ ಆಪ್ ಸರಕಾರದಿಂದ 21 ಸಂಸದೀಯ ಕಾರ್ಯದರ್ಶಿಗಳ ನೇಮಕವನ್ನು ಬುಧವಾರ ವಿರೋಧಿಸಿದ ಕೇಂದ್ರವು, ಹಾಲಿ ಕಾನೂನಿನಂತೆ ಅದು ಮುಖ್ಯಮಂತ್ರಿಗಳಿಗಾಗಿ ಓರ್ವ ಸಂಸದೀಯ ಕಾರ್ಯದರ್ಶಿಯನ್ನು ಮಾತ್ರ ಹೊಂದಬಹುದಾಗಿದೆ ಎಂದು ದಿಲ್ಲಿ ಉಚ್ಚ ನ್ಯಾಯಾಲಯಕ್ಕೆ ತಿಳಿಸಿತು.

ಮುಖ್ಯಮಂತ್ರಿಗೆ ಸಂಸದೀಯ ಕಾರ್ಯದರ್ಶಿ ಹುದ್ದೆಯ ಹೊರತಾಗಿ ಆ ಹುದ್ದೆಯ ಕುರಿತು ಭಾರತದ ಸಂವಿಧಾನದಲ್ಲಾಗಲೀ ದಿಲ್ಲಿ ವಿಧಾನಸಭಾ ಸದಸ್ಯರ(ಅನರ್ಹತೆಯ ನಿವಾರಣೆ) ಕಾಯ್ದೆ,1997ರಲ್ಲಾಗಲೀ ಉಲ್ಲೇಖಿಸಲಾಗಿಲ್ಲ. ಆದ್ದರಿಂದ ದಿಲ್ಲಿ ಸರಕಾರವು ತನ್ನ 2015,ಮಾರ್ಚ್ 13ರ ಆದೇಶದ ಮೂಲಕ 21 ಆಪ್ ಶಾಸಕರನ್ನು ಸಂಸದೀಯ ಕಾರ್ಯದರ್ಶಿಗಳನ್ನು ನೇಮಕಗೊಳಿಸಿರುವುದು ಕಾನೂನುಬಾಹಿರವಾಗಿದೆ ಎಂದು ಗೃಹ ಸಚಿವಾಲಯದ ಪರ ಹಾಜರಿದ್ದ ಕೇಂದ್ರ ಸರಕಾರದ ಸ್ಥಾಯಿ ವಕೀಲ ಜಸ್ಮೀತ್ ಸಿಂಗ್ ಅವರು ಮುಖ್ಯ ನ್ಯಾಯಮೂರ್ತಿ ಜಿ.ರೋಹಿಣಿ ಮತ್ತು ನ್ಯಾ.ಸಂಗೀತಾ ಧಿಂಗ್ರಾ ಸೆಹಗಲ್ ಅವರ ಪೀಠಕ್ಕೆ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News